ನೀಸ್ ಹತ್ಯೆ ಪ್ರಕರಣ: ಮೂರನೇ ಆರೋಪಿ ಬಂಧನ
ಪ್ಯಾರಿಸ್,ಅ.31: ಪ್ರಾನ್ಸ್ನ ನೀಸ್ ನಗರದ ಚರ್ಚ್ನಲ್ಲಿ ಗುರುವಾರ ನಡೆದ ಚೂರಿ ದಾಳಿಯ ಘಟನೆಗೆ ಸಂಬಂಧಿಸಿ ಮೂರನೇ ಆರೋಪಿಯೊಬ್ಬನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ನೀಸ್ ನಗರದ ನೋಟ್ರಡಾಮ್ ಚರ್ಚ್ನಲ್ಲಿ ಗುರುವಾರ ಚೂರಿಯಿಂದ ದಾಳಿ ನಡೆಸಿದ ದುಷ್ಕರ್ಮಿಯೊಬ್ಬ ಮಹಿಳೆಯೊಬ್ಬರ ತಲೆ ಕಡಿದಿದ್ದನು ಹಾಗೂ ಇತರ ಇಬ್ಬರನ್ನು ಇರಿದು ಸಾಯಿಸಿದ್ದನು. ದಾಳಿ ನಡೆಸಿದ ವ್ಯಕ್ತಿಗೆ ಪೊಲೀಸರು ಗುಂಡಿಕ್ಕಿ, ಗಾಯಗೊಳಿಸಿದ್ದಾರೆ. ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆತನ ಪರಿಸ್ಥಿತಿ ಗಂಭೀರವಾಗಿದೆಯೆಂದು ತಿಳಿದುಬಂದಿದೆ.
ದಾಳಿಗೆ ಒಂದು ದಿನ ಮೊದಲು ಹಂತಕನನ್ನು ಭೇಟಿಯಾಗಿದ್ದವೆಂದು ಶಂಕಿಸಲಾದ 35 ವರ್ಷದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದ್ಜಾರೆ ಎಂದು ನ್ಯಾಯಾಂಗ ಇಲಾಖೆಯ ಮೂಲಗಳು ತಿಳಿಸಿವೆ.
Next Story