ಆ್ಯಸ್ಟ್ರಝೆನೆಕದಿಂದ ಪ್ರತಿ ವಾರ 20 ಲಕ್ಷ ಡೋಸ್ ಕೋವಿಡ್ ಲಸಿಕೆ ಪೂರೈಕೆ
ಲಂಡನ್, ಜ. 2: ಜನವರಿ ಮಧ್ಯಭಾಗದ ಬಳಿಕ ಆ್ಯಸ್ಟ್ರಝೆನೆಕ ಔಷಧ ತಯಾರಿಕಾ ಕಂಪೆನಿಯು ಪ್ರತಿ ವಾರ ಬ್ರಿಟನ್ಗೆ ಸುಮಾರು 20 ಲಕ್ಷ ಕೋವಿಡ್-19 ಲಸಿಕಾ ಡೋಸ್ಗಳನ್ನು ಪೂರೈಸಲಿದೆ ಎಂದು ‘ದ ಟೈಮ್ಸ್’ ವರದಿ ಮಾಡಿದೆ.
ಮುಂದಿನ ವಾರ ಒಟ್ಟು ಸುಮಾರು 20 ಲಕ್ಷ ಲಸಿಕಾ ಡೋಸ್ಗಳನ್ನು ಪೂರೈಸುವ ನಿರೀಕ್ಷೆಯನ್ನು ಕಂಪೆನಿಯು ಹೊಂದಿದೆ ಎಂದು ಪತ್ರಿಕೆ ತಿಳಿಸಿದೆ.
‘‘ಕಂಪೆನಿಯು ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿದೆ. ಜನವರಿ ಮೂರನೇ ವಾರದ ಕೊನೆಯ ವೇಳೆಗೆ, ಪ್ರತಿ ವಾರ ಅದು ಬ್ರಿಟನ್ಗೆ 20 ಲಕ್ಷ ಡೋಸ್ಗಳನ್ನು ಪೂರೈಸಲು ಸಮರ್ಥವಾಗಿರುತ್ತದೆ’’ ಎಂದು ವರದಿ ತಿಳಿಸಿದೆ.
ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯ ಮತ್ತು ಆಸ್ಟ್ರಝೆನೆಕ ಕಂಪೆನಿ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಲಸಿಕೆಗೆ ಬ್ರಿಟನ್ ಬುಧವಾರ ಅನುಮೋದನೆ ನೀಡಿದೆ.
Next Story