ಬಾಂಗ್ಲಾ: ರೊಹಿಂಗ್ಯಾ ಶಿಬಿರಗಳಲ್ಲಿ ಬೆಂಕಿ; ಸಾವಿರಾರು ಮಂದಿ ನಿರಾಶ್ರಿತರು
ಸಾಂದರ್ಭಿಕ ಚಿತ್ರ
ಚಿತ್ತಗಾಂಗ್ (ಬಾಂಗ್ಲಾದೇಶ), ಜ. 14: ದಕ್ಷಿಣ ಬಾಂಗ್ಲಾದೇಶದಲ್ಲಿರುವ ರೊಹಿಂಗ್ಯಾ ನಿರಾಶ್ರಿತರ ಶಿಬಿರಗಳಲ್ಲಿ ಗುರುವಾರ ಬೆಂಕಿ ಅಪಘಾತ ಸಂಭವಿಸಿದ್ದು, ಸಾವಿರಾರು ನಿರಾಶ್ರಿತರಿಗೆ ಸೇರಿದ ಮನೆಗಳು ನಾಶವಾಗಿವೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ (ಯುಎನ್ಎಚ್ಸಿಆರ್) ಹೇಳಿದೆ.
ಭಾರೀ ಪ್ರಮಾಣದ ಬೆಂಕಿ ಅಪಘಾತದಲ್ಲಿ ಕಾಕ್ಸ್ ಬಝಾರ್ ಜಿಲ್ಲೆಯ ನಯಪಾರದಲ್ಲಿರುವ 550ಕ್ಕೂ ಅಧಿಕ ಶಿಬಿರಗಳು ಸಂಪೂರ್ಣವಾಗಿ ಅಥವಾ ಆಂಶಿಕವಾಗಿ ನಾಶವಾಗಿವೆ ಎಂದು ಅದು ತಿಳಿಸಿದೆ. ಈ ಶಿಬಿರಗಳಲ್ಲಿ ಕನಿಷ್ಠ 3,500 ನಿರಾಶ್ರಿತರು ವಾಸಿಸುತ್ತಿದ್ದರು.
ಅದೇ ವೇಳೆ, ಸುಮಾರು 150 ಅಂಗಡಿಗಳು ಮತ್ತು ಪರೋಪಕಾರಿ ಸಂಘಟನೆಯೊಂದಕ್ಕೆ ಸೇರಿದ ಕಚೇರಿಯೂ ಸುಟ್ಟು ಹೋಗಿದೆ.
Next Story