ಅಮೆರಿಕದ ರಾಷ್ಟ್ರೀಯ ಆರ್ಥಿಕ ಮಂಡಳಿಯ ಉಪ ನಿರ್ದೇಶಕಿಯಾಗಿ ಭಾರತ ಮೂಲದ ಸಮೀರಾ ಫಾಝಿಲಿ ನೇಮಕ
ವಾಶಿಂಗ್ಟನ್: ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರು ಭಾರತೀಯ-ಅಮೆರಿಕನ್ ಸಮೀರಾ ಫಾಝಿಲಿ ಅವರನ್ನು ಶ್ವೇತ ಭವನದ ರಾಷ್ಟ್ರೀಯ ಆರ್ಥಿಕ ಮಂಡಳಿಯ ಉಪ ನಿರ್ದೇಶಕಿಯಾಗಿ ನೇಮಕ ಮಾಡಿದ್ದಾರೆ.
ಸಮೀರಾ ಅವರ ನೇಮಕವನ್ನು ಬೈಡನ್-ಕಮಲಾ ಹ್ಯಾರಿಸ್ ಅವರ ಅಧಿಕಾರ ಹಸ್ತಾಂತರ ಪ್ರಕ್ರಿಯೆಯ ತಂಡ ಶುಕ್ರವಾರ ಪ್ರಕಟಿಸಿದೆ.
ಸಮೀರಾ ಅವರು ಬೈಡನ್ ಆಡಳಿತದಲ್ಲಿ ಪ್ರಮುಖ ಹುದ್ದೆ ಅಲಂಕರಿಸಲಿರುವ ಕಾಶ್ಮೀರ ಮೂಲದ ಎರಡನೇ ಭಾರತೀಯ ಅಮೆರಿಕನ್. ಕಾಶ್ಮೀರ ಮೂಲದ ಭಾರತೀಯ-ಅಮೆರಿಕನ್ ಆಯಿಷಾ ಶಾ ಅವರನ್ನು ಇಂತಹದ್ದೇ ಪ್ರಮುಖ ಹುದ್ದೆ ಯೊಂದಕ್ಕೆ ಡಿಸೆಂಬರ್ ನಲ್ಲಿ ನೇಮಿಸಲಾಗಿದೆ.
Next Story