ನೂತನ ಸಮೀಕ್ಷೆಯಲ್ಲಿ ಟ್ರಂಪ್ ಜನಪ್ರಿಯತೆ ಮಟ್ಟ ಪಾತಾಳಕ್ಕೆ
ವಾಶಿಂಗ್ಟನ್, ಜ. 16: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಕಳೆದ ವಾರ ದೇಶದ ಸಂಸತ್ ಮೇಲೆ ನಡೆಸಿದ ದಾಳಿಯ ಬಳಿಕ, ಟ್ರಂಪ್ರ ಜನಪ್ರಿಯತೆ ಮಟ್ಟ ಸಾರ್ವಕಾಲಿಕ ತಳವನ್ನು ಕಂಡಿದೆ. ಅವರು ತನ್ನದೇ ಪಕ್ಷದ ಮತದಾರರ ಬೆಂಬಲವನ್ನೂ ಕಳೆದುಕೊಂಡಿದ್ದಾರೆ.
ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್ ಮಾಡುತ್ತಿರುವ ಕೆಲಸವನ್ನು ಕೇವಲ 29 ಶೇಕಡ ಅಮೆರಿಕನ್ನರು ಅನುಮೋದಿಸಿದ್ದಾರೆ ಎಂದು ಪ್ಯೂ ರಿಸರ್ಚ್ ಸೆಂಟರ್ ಶುಕ್ರವಾರ ಬಿಡುಗಡೆ ಮಾಡಿದ ನೂತನ ಸಮೀಕ್ಷೆಯೊಂದು ತಿಳಿಸಿದೆ. ಇದು ತನ್ನ ಅಧಿಕಾರಾವಧಿಯಲ್ಲಿ ಈವರೆಗೆ ಅವರು ಪಡೆದ ಕನಿಷ್ಠ ಅನುಮೋದನೆಯಾಗಿದೆ ಎಂದು ‘ದ ಹಿಲ್’ ವರದಿ ಮಾಡಿದೆ.
ಅಧ್ಯಕ್ಷರಾಗಿ ಟ್ರಂಪ್ರ ನಿರ್ವಹಣೆ ಸರಿಯಿಲ್ಲ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ 68 ಶೇಕಡ ಮಂದಿ ಹೇಳಿದ್ದಾರೆ. ಸಂಸತ್ ಮೇಲೆ ನಡೆದ ದಾಳಿಯ ಹೆಚ್ಚಿನ ಹೊಣೆಯನ್ನು ಟ್ರಂಪ್ ಹೊರುತ್ತಾರೆ ಎಂದು 52 ಶೇಕಡ ಮಂದಿ ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
Next Story