ಅಮೆರಿಕಾ ಅಧ್ಯಕ್ಷ ಬೈಡನ್ರ ಕೋವಿಡ್ ತಂಡಕ್ಕೆ ಭಾರತೀಯ ಅಮೆರಿಕನ್ ನೇಮಕ
photo:twitter
ವಾಶಿಂಗ್ಟನ್, ಜ. 16: ಭಾರತೀಯ ಅಮೆರಿಕನ್ ಆರೋಗ್ಯ ನೀತಿ ಪರಿಣತ ವಿದುರ್ ಶರ್ಮರನ್ನು ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಶುಕ್ರವಾರ ತನ್ನ ಕೋವಿಡ್-19 ತಂಡಕ್ಕೆ ಪರೀಕ್ಷಾ ಸಲಹೆಗಾರನಾಗಿ ಸೇರಿಸಿಕೊಂಡಿದ್ದಾರೆ.
ಈ ಹಿಂದಿನ ಒಬಾಮ ಆಡಳಿತದಲ್ಲಿ, ಶರ್ಮ ದೇಶಿ ನೀತಿ ಮಂಡಳಿಯಲ್ಲಿ ಆರೋಗ್ಯ ನೀತಿ ಸಲಹೆಗಾರನಾಗಿ ಸೇವೆ ಸಲ್ಲಿಸಿದ್ದರು. ಆಗ ಅಫೋರ್ಡಬಲ್ ಕೇರ್ ಆ್ಯಕ್ಟ್ನ ಜಾರಿಯನ್ನು ಬೆಂಬಲಿಸಿದ್ದರು.
ಭಾರತೀಯ ವಲಸಿಗರ ಪುತ್ರನಾಗಿರುವ ಅವರು ವಿಸ್ಕೋನ್ಸಿನ್ನಲ್ಲಿ ಜನಿಸಿದರು ಹಾಗೂ ಮಿನಸೋಟದಲ್ಲಿ ಬೆಳೆದರು.
Next Story