ತನಗೆ ತಾನೇ ಕ್ಷಮಾದಾನ ಘೋಷಿಸಿಕೊಳ್ಳುತ್ತಾರೆಯೇ ಡೊನಾಲ್ಡ್ ಟ್ರಂಪ್ ?
ವಾಶಿಂಗ್ಟನ್, ಜ. 18: ಕ್ಷಮಾದಾನ ಮತ್ತು ಶಿಕ್ಷೆ ಕಡಿತಕ್ಕೆ ಒಳಗಾಗುವವರ 100ಕ್ಕೂ ಅಧಿಕ ಮಂದಿಯ ಪಟ್ಟಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಯಾರಿಸಿದ್ದಾರೆ, ಆದರೆ, ಈ ಹಂತದಲ್ಲಿ ಅವರು ತನಗೆ ತಾನೇ ಕ್ಷಮಾದಾನ ಘೋಷಿಸುವ ಸಾಧ್ಯತೆಯಿಲ್ಲ ಎಂದು ಮೂಲವೊಂದನ್ನು ಉಲ್ಲೇಖಿಸಿ ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕ್ಷಮಾದಾನ ಸ್ವೀಕರಿಸುವವರ ಪಟ್ಟಿಯನ್ನು ಅವರು ಮಂಗಳವಾರ ಬಿಡುಗಡೆ ಮಾಡಲಿದ್ದಾರೆ.
ತನಗೆ ತಾನೇ ಕ್ಷಮಾದಾನ ನೀಡುವ ಸಾಧ್ಯತೆ ಬಗ್ಗೆ ಟ್ರಂಪ್ ತನ್ನ ಸಲಹೆಗಾರರೊಂದಿಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ, ಆ ಕ್ರಮವು ನಿಮ್ಮನ್ನು ದೋಷಿಯೆಂಬಂತೆ ಬಿಂಬಿಸುವುದರಿಂದ ಹಾಗೆ ಮಾಡದಿರುವಂತೆ ಅವರ ಆಡಳಿತದ ಹಿರಿಯ ಅಧಿಕಾರಿಗಳು ಎಚ್ಚರಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಸ್ವಯಂ-ಕ್ಷಮಾದಾನ ನೀಡುವುದು ಅಸಾಂವಿಧಾನಿಕ ಎಂಬುದಾಗಿ ಹಲವು ಪರಿಣತರು ಹೇಳಿದ್ದಾರೆ. ತನ್ನದೇ ವಿಷಯದಲ್ಲಿ ಯಾರೂ ನ್ಯಾಯಾಧೀಶರಾಗುವಂತಿಲ್ಲ ಎಂಬ ಮೂಲ ತತ್ವಕ್ಕೆ ಇದು ವಿರುದ್ಧವಾಗಿದೆ ಎಂದಿದ್ದಾರೆ.
Next Story