ಅಫ್ಘಾನ್: ಆತ್ಮಹತ್ಯಾ ಬಾಂಬ್ ದಾಳಿ; 8 ಸೇನಾ ಸಿಬ್ಬಂದಿ ಸಾವು
ಸಾಂದರ್ಭಿಕ ಚಿತ್ರ
ಕಾಬೂಲ್ (ಅಫ್ಘಾನಿಸ್ತಾನ), ಜ. 30: ಅಫ್ಘಾನಿಸ್ತಾನದ ನಂಗರ್ಹಾರ್ ಪ್ರಾಂತದಲ್ಲಿ ಶನಿವಾರ ಬೆಳಗ್ಗೆ ಅಫ್ಘಾನ್ ಪಡೆಗಳ ನೆಲೆಯೊಂದರ ಮೇಲೆ ಆತ್ಮಹತ್ಯಾ ಬಾಂಬರ್ ಒಬ್ಬ ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ ಕನಿಷ್ಠ 8 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ.
ಆತ್ಮಹತ್ಯಾ ಬಾಂಬರ್ ಸ್ಫೋಟಕಗಳಿಂದ ತುಂಬಿದ್ದ ವಾಹನವೊಂದನ್ನು ಸೇನಾ ನೆಲೆಗೆ ನುಗ್ಗಿಸಿ ಸ್ಫೋಟಿಸಿದಾಗ ದುರಂತ ಸಂಭವಿಸಿದೆ. ದಾಳಿಯ ಹೊಣೆಯನ್ನು ತಾಲಿಬಾನ್ ವಹಿಸಿಕೊಂಡಿದೆ.
ಕಳೆದ ವರ್ಷ ಅಮೆರಿಕದೊಂದಿಗೆ ಮಾಡಿಕೊಂಡ ಒಪ್ಪಂದದಂತೆ ತಾಲಿಬಾನ್ ನಡೆಯುತ್ತಿಲ್ಲ ಎಂಬುದಾಗಿ ಅಮೆರಿಕದ ರಕ್ಷಣಾ ಸಚಿವಾಲಯ ಹೇಳಿದ ಎರಡು ದಿನಗಳ ಬಳಿಕ ಈ ದಾಳಿ ನಡೆದಿದೆ.
Next Story