ಗ್ರೇಟಾ ಥನ್ಬರ್ಗ್ ಸಹಿತ ಹಲವು ಅಂತಾರಾಷ್ಟ್ರೀಯ ಗಣ್ಯರಿಂದ ರೈತರ ಹೋರಾಟಕ್ಕೆ ಬೆಂಬಲ
ಹೊಸದಿಲ್ಲಿ: ಕೃಷಿ ಕಾಯಿದೆಯ ವಾಪಸಾತಿಗೆ ಆಗ್ರಹಿಸಿ ದಿಲ್ಲಿಯ ಗಡಿ ಭಾಗಗಳಲ್ಲಿ ಕಳೆದ ಹಲವಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ರೈತರಿಗೆ ಖ್ಯಾತ ಯುವ ಪರಿಸರ ಹೋರಾಟಗಾರ್ತಿ ಸ್ವೀಡನ್ ದೇಶದ ಗ್ರೆಟಾ ಥನ್ಬರ್ಗ್ ಬೆಂಬಲ ಸೂಚಿಸಿದ್ದಾರೆ. ``ನಾವು ಭಾರತದಲ್ಲಿ #ರೈತರ ಪ್ರತಿಭಟನೆಗೆ ಬೆಂಬಲವಾಗಿ ನಿಲ್ಲುತ್ತೇವೆ,'' ಎಂದು ಮಂಗಳವಾರ ರಾತ್ರಿ ಗ್ರೆಟಾ ಟ್ವೀಟ್ ಮಾಡಿದ್ದಾರೆ. ಗ್ರೆಟಾ ಮಾತ್ರವಲ್ಲದೇ ಇನ್ನಿತರ ಹಲವಾರು ಅಂತಾರಾಷ್ಟ್ರೀಯ ಗಣ್ಯರು ಈ ಕುರಿತಾದಂತೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ಖ್ಯಾತ ಅಂತಾರಾಷ್ಟ್ರೀಯ ಪಾಪ್ ಗಾಯಕಿ ರಿಹಾನ್ನ ಅವರು ಕೂಡ ರೈತರ ಪ್ರತಿಭಟನೆ ಕುರಿತು ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಗ್ರೆಟಾ ಅವರ ಟ್ವೀಟ್ ಬಂದಿದೆ.
ಕಾಮೆಡಿಯನ್ ಹಾಗೂ ಯೂಟ್ಯೂಬರ್ ಲಿಲಿ ಸಿಂಗ್,ಅಮೆರಿಕನ್ ಪರಿಸರ ಹೋರಾಟಗಾರ್ತಿ ಜೆಮೀ ಮಾರ್ಗೊಲಿನ್, ಕೀನ್ಯಾದ ಪರಿಸರ ಹೋರಾಟಗಾರ್ತಿ ಎಲಿಝಬೆತ್ ವದೂಟಿ, ಯುನೈಟೆಡ್ ಕಿಂಗ್ಡಮ್ ನ ಸಂಸದೆ ಕ್ಲಾಡಿಯಾ ವೆಬ್, ಪ್ರೊಫೆಸರ್ ಹಾಗೂ ಸಾಹಿತಿ ಖಾಲಿದ್ ಬೈದೋನ್, ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ರ ಸಂಬಂಧಿ ಮೀನಾ ಹ್ಯಾರಿಸ್, ಹಾಗೂ ಇನ್ನಿತರ ಹಲವಾರು ಗಣ್ಯರು ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದಾರೆ.
"ನಾವು ಇದರ ಬಗ್ಗೆ ಏಕೆ ಮಾತನಾಡುತ್ತಿಲ್ಲ?#ರೈತರ ಪ್ರತಿಭಟನೆ," ಎಂದು ರಿಹಾನ್ನ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಆಕೆಯ ಫಾಲೋವರ್ಸ್ ಸಂಖ್ಯೆ ಇನ್ನೂ ಒಂದು ಲಕ್ಷದಷ್ಟು ಏರಿಕೆಯಾಗಿದೆ. ರಿಹಾನ್ನಾಗೆ ಈಗಾಗಲೇ 100 ಮಿಲಿಯನ್ಗೂ ಅಧಿಕ ಫಾಲೋವರ್ಸ್ ಇದ್ದಾರೆ.
We stand in solidarity with the #FarmersProtest in India.
— Greta Thunberg (@GretaThunberg) February 2, 2021
https://t.co/tqvR0oHgo0
Yes! Thank you so much @rihanna. This is a humanity issue! #IStandWithFarmers and this narrative is TIRED. https://t.co/H0h5EM7mNW
— Lilly // #LateWithLilly (@Lilly) February 2, 2021
I stand with farmers of India! Please support the #FarmersProtest! @LicypriyaK https://t.co/eQxda34JX9
— Jamie Margolin (@Jamie_Margolin) February 2, 2021
'The big picture here is that India must begin to value the lives and well-being of its own citizens over the potential economic gains for its nation.'Standing in solidarity with the #FarmersProtest @LicypriyaK https://t.co/72B0SfCxCA
— Elizabeth Wathuti (@lizwathuti) February 2, 2021
Solidarity to the Indian Farmers.
— Claudia Webbe MP (@ClaudiaWebbe) February 2, 2021
Thank you Rihanna.
In an era where political leadership is lacking we are grateful for others stepping forward#FarmersProtest pic.twitter.com/jdZnGWURBl
Salute to Rihanna for shedding light on the #FarmersProtest in #India - she is bringing needed attention to a movement silenced by Twitter and violently suppressed by the Modi government pic.twitter.com/x5GLJSjqPw
— Khaled Beydoun (@KhaledBeydoun) February 2, 2021
It’s no coincidence that the world’s oldest democracy was attacked not even a month ago, and as we speak, the most populous democracy is under assault. This is related. We ALL should be outraged by India’s internet shutdowns and paramilitary violence against farmer protesters. https://t.co/yIvCWYQDD1 pic.twitter.com/DxWWhkemxW
— Meena Harris (@meenaharris) February 2, 2021
“Indian authorities should be releasing activists and others already jailed or facing criminal charges in politically motivated cases, not adding to that list" ~ @mg2411 https://t.co/OyiTBUjNz2 #FarmersProtest https://t.co/4hRqEISrML
— Human Rights Watch (@hrw) February 2, 2021