ಮಲೇಶ್ಯ: ಕೊರೋನ ವೈರಸ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ; ಮೊದಲಿಗರಾಗಿ ಲಸಿಕೆ ಸ್ವೀಕರಿಸಿದ ಪ್ರಧಾನಿ
ಕೌಲಾಲಂಪುರ (ಮಲೇಶ್ಯ), ಫೆ. 24: ಕೊರೋನ ವೈರಸ್ ಸಾಂಕ್ರಾಮಿಕ ವಿರುದ್ಧದ ಲಸಿಕೆ ಅಭಿಯಾನಕ್ಕೆ ಮಲೇಶ್ಯ ಬುಧವಾರ ಚಾಲನೆ ನೀಡಿದೆ. ಅಮೆರಿಕದ ಔಷಧ ತಯಾರಿಕಾ ಸಂಸ್ಥೆ ಫೈಝರ್ ಮತ್ತು ಜರ್ಮನಿಯ ಬಯೋಎನ್ಟೆಕ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಮಲೇಶ್ಯ ಬಳಸಿಕೊಂಡಿದೆ.
ಲಸಿಕೆಯ ಸುರಕ್ಷತೆಯನ್ನು ಜನರಿಗೆ ಮನವರಿಕೆ ಮಾಡಿಕೊಡುವುದಕ್ಕಾಗಿ ಪ್ರಧಾನಿ ಮುಹ್ಯುದ್ದೀನ್ ಯಾಸಿನ್ ಮೊದಲಿಗರಾಗಿ ಲಸಿಕೆಯನ್ನು ಸ್ವೀಕರಿಸಿದರು.
ಮುಂದಿನ ವರ್ಷದ ಫೆಬ್ರವರಿ ವೇಳೆಗೆ ತನ್ನ 3.2 ಕೋಟಿ ಜನಸಂಖ್ಯೆಯ ಕನಿಷ್ಠ 80 ಶೇಕಡ ಮಂದಿಗೆ ಲಸಿಕೆ ನೀಡುವ ಮಹತ್ವಾಕಾಂಕ್ಷಿ ಗುರಿಯನ್ನು ಮಲೇಶ್ಯ ಹೊಂದಿದೆ.
Next Story