ಬ್ರೆಝಿಲ್: ಸತತ 2ನೇ ದಿನವೂ ದಾಖಲೆ ಸಂಖ್ಯೆಯ ಕೊರೋನ ಸಾವು
ಬ್ರೆಸೀಲಿಯ (ಬ್ರೆಝಿಲ್), ಮಾ. 4: ಬ್ರೆಝಿಲ್ನಲ್ಲಿ ನಿರಂತರ ಎರಡನೇ ದಿನವಾದ ಬುಧವಾರವೂ ದಾಖಲೆ ಸಂಖ್ಯೆಯ ಕೋವಿಡ್-19 ಸಾವುಗಳು ವರದಿಯಾಗಿವೆ. 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 1,910 ಮಂದಿ ಕೊರೋನ ವೈರಸ್ಗೆ ಬಲಿಯಾಗಿದ್ದಾರೆ.
ಇದರೊಂದಿಗೆ ಬ್ರೆಝಿಲ್ನಲ್ಲಿ ಈ ಸಾಂಕ್ರಾಮಿಕಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 2,59,271ಕ್ಕೆ ಏರಿದೆ ಎಂದು ದೇಶದ ಆರೋಗ್ಯ ಸಚಿವಾಲಯ ತಿಳಿಸಿದೆ. ಇದು ಅಮೆರಿಕದ ಬಳಿಕ ದೇಶವೊಂದರಲ್ಲಿ ಸಂಭವಿಸಿರುವ ಎರಡನೇ ಅತ್ಯಧಿಕ ಸಾವಾಗಿದೆ.
‘‘ಸಾಂಕ್ರಾಮಿಕ ಆರಂಭಗೊಂಡಂದಿನಿಂದ ಮೊದಲ ಬಾರಿಗೆ ದೇಶಾದ್ಯಂತ ಪರಿಸ್ಥಿತಿಯು ಹದಗೆಟ್ಟಿರುವುದನ್ನು ನಾವು ನೋಡುತ್ತಿದ್ದೇವೆ’’ ಎಂದು ಸಚಿವಾಲಯ ಹೇಳಿದೆ.
ದೇಶದಲ್ಲಿ ಮಂಗಳವಾರ 1,641 ಮಂದಿ ಕೊರೋನ ವೈರಸ್ಗೆ ಬಲಿಯಾಗಿದ್ದರು.
Next Story