"ಕೊರೋನಾವೈರಸ್ ಲ್ಯಾಬ್ನಿಂದ ಸೋರಿಕೆಯಾಗಿರುವ ಸಾಧ್ಯತೆ ಕಡಿಮೆ, ಬಾವಲಿಗಳು ಕಾರಣವಾಗಿರಬಹುದು"
ವಿಶ್ವ ಆರೋಗ್ಯ ಸಂಸ್ಥೆ
ಜಿನೀವಾ: ಕೊರೋನಾವೈರಸ್ ಸೋಂಕು ಬಾವಲಿಗಳಿಂದ ಬೇರೊಂದು ಪ್ರಾಣಿಯ ಮೂಲಕ ಮನುಷ್ಯರಿಗೆ ಹರಡಿರುವ ಸಾಧ್ಯತೆಯಿದೆ ಹಾಗೂ ಪ್ರಯೋಗಾಲಯದಿಂದ ಈ ವೈರಾಣು ಸೋರಿಕೆ ಸಾಧ್ಯತೆ ಬಹಳಷ್ಟು ಕಡಿಮೆ ಎಂದು ಕೋವಿಡ್-19 ವೈರಾಣು ಹೇಗೆ ಹುಟ್ಟಿಕೊಂಡಿತು ಎಂಬುದನ್ನು ತಿಳಿಯಲು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಚೀನಾ ಜಂಟಿಯಾಗಿ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.
ಈ ಅಧ್ಯಯನದ ಫಲಿತಾಂಶ ನಿರೀಕ್ಷೆಯಂತೆಯೇ ಇದ್ದರೂ ಹಲವು ಪ್ರಶ್ನೆಗಳಿಗೆ ಅದು ಉತ್ತರ ನೀಡಿಲ್ಲ. ಪ್ರಯೋಗಾಲಯದಿಂದ ವೈರಾಣು ಸೋರಿಕೆಯಾಗಿರುವ ಸಾಧ್ಯತೆಯನ್ನು ಹೊರತುಪಡಿಸಿ ಬೇರೆ ಎಲ್ಲಾ ಕೋನದಿಂದಲೂ ಹೆಚ್ಚಿನ ಸಂಶೋಧನೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾ ನಿರ್ಧರಿಸಿವೆ.
Next Story