ಏಶ್ಯನ್ ಅಮೆರಿಕನ್ನರ ಮೇಲಿನ ದಾಳಿ ತಡೆಯಲು ಹೆಚ್ಚುವರಿ ಕ್ರಮ: ಬೈಡನ್
ವಾಶಿಂಗ್ಟನ್, ಮಾ. 31: ಅಮೆರಿಕದಲ್ಲಿ ಏಶ್ಯನ್ ಅಮೆರಿಕನ್ನರ ವಿರುದ್ಧ ನಡೆಯುತ್ತಿರುವ ಹಿಂಸೆಯನ್ನು ನಿಲ್ಲಿಸಲು ಅಧ್ಯಕ್ಷ ಜೋ ಬೈಡನ್ ಹೆಚ್ಚುವರಿ ಕ್ರಮಗಳನ್ನು ಘೋಷಿಸಿದ್ದಾರೆ.
ಏಶ್ಯನ್ ಅಮೆರಿಕನ್ನರು ಮತ್ತು ಪೆಸಿಫಿಕ್ ದ್ವೀಪವಾಸಿಗಳಿಗೆ ಸಂಬಂಧಿಸಿದ ಶ್ವೇತಭವನದ ನೀತಿಗೆ ಶಕ್ತಿ ತುಂಬುವುದು ಮತ್ತು ಜಾರಿಗೊಳಿಸುವುದು, ಅಮೆರಿಕ ಸರಕಾರ ತೆಗೆದುಕೊಂಡ ಕ್ರಮಗಳ ಪೈಕಿ ಒಂದಾಗಿದೆ.
‘‘ಏಶ್ಯನ್ ಅಮೆರಿಕನ್ನರ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ನಾವು ಮೌನವಾಗಿ ಇರುವಂತಿಲ್ಲ’’ ಎಂದು ಬೈಡನ್ ಟ್ವೀಟ್ ಮಾಡಿದ್ದಾರೆ. ‘‘ಅದಕ್ಕಾಗಿ ನಾನು ಇಂದು ಈ ಸಮಸ್ಯೆಯನ್ನು ಎದುರಿಸಲು ಹೆಚ್ಚೆುವರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಈ ನಿಟ್ಟಿನಲ್ಲಿ ಏಶ್ಯನ್ನರ ವಿರುದ್ಧ ನಡೆಯುತ್ತಿರುವ ಹಿಂಸೆಯನ್ನು ನಿಭಾಯಿಸಲು ಕಾನೂನು ಇಲಾಖೆಯು ಹೊಸದೊಂದು ಉಪಕ್ರಮವನ್ನು ರೂಪಿಸುತ್ತಿದೆ’’ ಎಂದು ಬೈಡನ್ ನುಡಿದರು.
‘‘ಈ ದಾಳಿಗಳು ತಪ್ಪು, ಇವು ಅವೆುರಿಕದ ಸಂಸ್ಕೃತಿಗೆ ವಿರುದ್ಧವಾಗಿವೆ. ಹಾಗಾಗಿ ಅವುಗಳು ನಿಲ್ಲಬೇಕಾಗಿವೆ’’ ಎಂದರು.
Next Story