ಇಂಡೋನೇಶ್ಯದ ಸಬ್ಮರೀನ್ ಪತ್ತೆ; ಎಲ್ಲ 53 ನಾವಿಕರು ಮೃತ
ಬಾಲಿ (ಇಂಡೋನೇಶ್ಯ), ಎ. 25; ನಾಪತ್ತೆಯಾಗಿರುವ ಇಂಡೋನೇಶ್ಯದ ಸಬ್ಮರೀನ್ ಬಾಲಿ ದೀಪಕ್ಕೆ ಹೊಂದಿಕೊಂಡ ಸಮುದ್ರ ತಳದಲ್ಲಿ ಒಡೆದು ಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ದೇಶದ ಸೇನೆ ರವಿವಾರ ತಿಳಿಸಿದೆ. ಅದರಲ್ಲಿದ್ದ ಎಲ್ಲ 53 ನಾವಿಕರು ಮೃತಪಟ್ಟಿದ್ದಾರೆ ಎಂದು ಅದು ಹೇಳಿದೆ.
ಕೆಆರ್ಐ ನಂಗಾಲ 402 ಸಬ್ಮರೀನ್ನ ಭಾಗಗಳು ಪತ್ತೆಯಾಗಿವೆ. ಅದು ಮೂರು ಭಾಗಗಳಾಗಿ ಒಡೆದಿದೆ ಎಂದು ಇಂಡೋನೇಶ್ಯದ ನೌಕಾಪಡೆ ಮುಖ್ಯಸ್ಥ ಯೂಡೊ ಮರ್ಗೋನೊ ಹೇಳಿದರು.
ರವಿವಾರ ಬೆಳಗ್ಗೆ 800 ಮೀಟರ್ಗೂ ಅಧಿಕ ಆಳದ ಸ್ಥಳದಿಂದ ಸಂಕೇತಗಳು ಸಿಕ್ಕಿವೆ ಎಂದು ಅಧಿಕಾರಿಗಳು ಹೇಳಿದರು. ಸಿಂಗಾಪುರದಿಂದ ಪಡೆದ ನೀರಿನಡಿಯಲ್ಲಿ ಸಬ್ಮರೀನ್ ರಕ್ಷಿಸುವ ನೌಕೆಯನ್ನು ಬಳಸಿ ಅದರ ಚಿತ್ರವನ್ನು ತೆಗೆದಿರುವುದಾಗಿ ಅವರು ಹೇಳಿದರು.
Next Story