ಮೌಂಟ್ ಎವರೆಸ್ಟ್ ಏರಿದ ಏಶ್ಯದ ಮೊದಲ ಅಂಧ ವ್ಯಕ್ತಿ
ಫೋಟೊ ಕೃಪೆ: twitter.com/Zhang_Hong_76
ಮೌಂಟ್ ಎವರೆಸ್ಟ್ (ನೇಪಾಳ), ಮೇ 30: ಚೀನಾದ 46 ವರ್ಷದ ಝಾಂಗ್ ಹೊಂಗ್ ಜಗತ್ತಿನ ಅತಿ ಎತ್ತರದ ಪರ್ವತ ಶಿಖರ ಮೌಂಟ್ ಎವರೆಸ್ಟನ್ನು ಏರಿದ ಏಶ್ಯದ ಮೊದಲ ಹಾಗೂ ಜಗತ್ತಿನ ಮೂರನೇ ಅಂಧ ವ್ಯಕ್ತಿಯಾಗಿ ದಾಖಲೆ ನಿರ್ಮಿಸಿದ್ದಾರೆ.
ಅವರು 8,849 ಮೀಟರ್ ಎತ್ತರದ ಹಿಮಾಚ್ಛಾದಿತ ಶಿಖರವನ್ನು ಮೇ 24ರಂದು ನೇಪಾಳದ ಬದಿಯಿಂದ ಏರಿದ್ದಾರೆ ಹಾಗೂ ಗುರುವಾರ ಮೂಲಶಿಬಿರಕ್ಕೆ ಮರಳಿದ್ದಾರೆ.
ಆರೋಹಣದಲ್ಲಿ ಅವರಿಗೆ ಮೂವರು ಮಾರ್ಗದರ್ಶಕರು ನೆರವು ನೀಡಿದ್ದಾರೆ.
ನೈರುತ್ಯ ಚೀನಾದ ಚೊಂಗ್ಕಿಂಗ್ ನಗರದಲ್ಲಿ ಜನಿಸಿದ ಝಾಂಗ್, 21ನೇ ವರ್ಷ ಪ್ರಾಯದಲ್ಲಿ ಗ್ಲೌಕೋಮದಿಂದಾಗಿ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದರು.
Next Story