ಅಫ್ಘಾನಿಸ್ತಾನ ಕುರಿತು ಭಾರತದ ಅಧ್ಯಕ್ಷತೆಯಲ್ಲಿ ಸೋಮವಾರ ವಿಶ್ವ ಸಂಸ್ಥೆ ಭದ್ರತಾ ಮಂಡಳಿ ಸಭೆ
ಹೊಸದಿಲ್ಲಿ: ತಾಲಿಬಾನಿಗಳು ಅಫ್ಗಾನಿಸ್ತಾನದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ನಂತರ ಅಲ್ಲಿನ ಹದಗೆಡುತ್ತಿರುವ ಸ್ಥಿತಿಯನ್ನು ಚರ್ಚಿಸಲು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸೋಮವಾರ ಸಭೆ ಸೇರಲಿದೆ.
ಭಾರತದ ಅಧ್ಯಕ್ಷತೆಯಲ್ಲಿ ಅಫ್ಗಾನಿಸ್ತಾನ ಕುರಿತಂತೆ ಭದ್ರತಾ ಮಂಡಳಿ ನಡೆಸಲಿರುವ ಎರಡನೇ ಸಭೆ ಇದಾಗಿರಲಿದೆ. ಜುಲೈ 31ರಂದು ಫ್ರಾನ್ಸ್ ದೇಶದಿಂದ ಭಾರತ ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ವಹಿಸಿಕೊಂಡಿತ್ತು.
ಸಭೆಯು ನ್ಯೂಯಾರ್ಕ್ನಲ್ಲಿ ಸೋಮವಾರ ಬೆಳಿಗ್ಗೆ 10 ಗಂಟೆಗೆ (ಭಾರತೀಯ ಕಾಲಮಾನ ಸಂಜೆ 7.30ಕ್ಕೆ) ನಡೆಯಲಿದೆ.
ಅಫ್ಗಾನಿಸ್ತಾನದಲ್ಲಿನ ಬೆಳವಣಿಗೆಗಳ ಕುರಿತಂತೆ ವಿಶ್ವ ಸಂಸ್ಥೆಯ ಮಹಾಕಾರ್ಯದರ್ಶಿ ಅಂಟೋನಿಯೋ ಗಟೆರೆಸ್ಸ್ ಅವರು ಸಭೆಗೆ ವಿವರಿಸಲಿದ್ದಾರೆ.
Next Story