9/11 ದಾಳಿಯಲ್ಲಿ ಲಾದೆನ್ ಪಾತ್ರವಿರಲಿಲ್ಲ: ತಾಲಿಬಾನ್ ಹೇಳಿಕೆ
ಕಾಬೂಲ್,ಆ.28: ಅಮೆರಿಕ ಸೇನೆಯಿದ ಹತನಾದ ಅಲ್ ಖೈದಾ ವರಿಷ್ಠ ಉಸಾಮಾ ಬಿನ್ ಲಾದೆನ್ 2001ರ ಸೆಪ್ಟೆಂಬರ್ 11ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಶಾಮೀಲಾಗಿರುವುದಕ್ಕೆ ಯಾವುದೇ ಆಧಾರವಿಲ್ಲವೆಂದು ತಾಲಿಬಾನ್ ಶುಕ್ರವಾರ ತಿಳಿಸಿದೆ.
ತಾಲಿಬಾನ್ ವಕ್ತಾರ ಝಬಿಹುಲ್ಲಾ ಮುಜಾಹಿದ್ ಬುಧವಾರ ಎನ್ಬಿಸಿ ನ್ಯೂಸ್ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ 9/11 ದಾಳಿಯಲ್ಲಿ ಉಸಾಮಾ ಬಿನ್ ಲಾದೆನ್ ಪಾತ್ರವಿರುವುದಕ್ಕೆ ಯಾವುದೇ ಆಧಾರವಿಲ್ಲ. ಆದರೆ ಲಾದೆನ್ ಅಫ್ಘಾನಿಸ್ತಾನದಲ್ಲಿದ್ದಾಗ, ಅಮೆರಿಕನ್ನರಿಗೆ ಆತ ಸಮಸ್ಯೆಯಾಗಿದ್ದ" ಎಂದು ಹೇಳಿದ್ದಾರೆ.
ಈಗ ಅಫ್ಘಾನಿಸ್ತಾನದ ನೆಲ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಕೆಯಾಗುವುದಿಲ್ಲವೆಂಬ ಭರವಸೆಯನ್ನು ನಾವು ನೀಡುತ್ತಿದ್ದೇವೆ ಎಂದು ಆತ ಹೇಳಿದ್ದಾರೆ.
Next Story