ಕಾಬೂಲ್ ನಲ್ಲಿನ ರಾಜತಾಂತ್ರಿಕ ಉಪಸ್ಥಿತಿಯನ್ನು ಖತರ್ ಗೆ ಸ್ಥಳಾಂತರಿಸಿದ ಅಮೆರಿಕ
ವಾಷಿಂಗ್ಟನ್, ಆ.31: ಅಫ್ಗಾನ್ ಗೆ ಸಂಬಂಧಿಸಿದಂತೆ ಸೋಮವಾರ ಹೊಸ ಅಧ್ಯಾಯ ಆರಂಭವಾಗಿದೆ ಎಂದಿರುವ ಅಮೆರಿಕ, ಕಾಬೂಲ್ ನಲ್ಲಿದ್ದ ರಾಯಭಾರಿ ಕಚೇರಿಯನ್ನು ಖತರ್ ಗೆ ಸ್ಥಳಾಂತರಿಸಿರುವುದಾಗಿ ಘೋಷಿಸಿದೆ.
ಅಫ್ಗಾನ್ ನಿಂದ ತೆರಳ ಬಯಸುವ ಎಲ್ಲಾ ಅಮೆರಿಕನ್ನರು ಕರೆಸಿಕೊಳ್ಳಲು ಅಮೆರಿಕ ಬದ್ಧವಾಗಿದೆ. ಇನ್ನೂ ಸುಮಾರು 200 ಅಮೆರಿಕನ್ನರು ಅಫ್ಗಾನ್ ನಲ್ಲಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹೇಳಿದ್ದಾರೆ. ಅಫ್ಗಾನ್ನಲ್ಲಿದ್ದ ನಮ್ಮ ರಾಜತಾಂತ್ರಿಕ ಉಪಸ್ಥಿತಿಯನ್ನು ರದ್ದುಗೊಳಿಸಿ ಖತರ್ ನ ದೋಹಾಕ್ಕೆ ಸ್ಥಳಾಂತರಿಸಿದ್ದು ಈ ಬಗ್ಗೆ ಸಂಸತ್ ಗೆ ಮಾಹಿತಿ ನೀಡಲಾಗುವುದು ಎಂದವರು ಹೇಳಿದ್ದಾರೆ.
Next Story