ಧೂಮಪಾನಿಗಳಲ್ಲಿ ಕೋವಿಡ್ ತೀವ್ರತೆ ಹೆಚ್ಚು: ಬ್ರಿಟನ್ ನ ಅಧ್ಯಯನ ವರದಿ | Vartha Bharati- ವಾರ್ತಾ ಭಾರತಿ

--

ಧೂಮಪಾನಿಗಳಲ್ಲಿ ಕೋವಿಡ್ ತೀವ್ರತೆ ಹೆಚ್ಚು: ಬ್ರಿಟನ್ ನ ಅಧ್ಯಯನ ವರದಿ

ಸಾಂದರ್ಭಿಕ ಚಿತ್ರ

 ಲಂಡನ್, ಸೆ.29: ಧೂಮಪಾನವು ಕೊರೋನ ಸೋಂಕಿನ ತೀವ್ರತೆಯನ್ನು ಮತ್ತು ಸಾವನ್ನಪ್ಪುವ ಅಪಾಯವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಬ್ರಿಟನ್ನಲ್ಲಿ ನಡೆಸಿರುವ ಅಧ್ಯಯನದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
  
‘ಥೊರಾಕ್ಸ್’ ನಿಯತಕಾಲಿಕದಲ್ಲಿ ಸೋಮವಾರ ಪ್ರಕಟವಾದ ವರದಿಯು, ಧೂಮಪಾನಿಗಳಲ್ಲಿ ಕೊರೋನ ಸೋಂಕಿನ ತೀವ್ರತೆ ಕಡಿಮೆ ಎಂಬ ಈ ಹಿಂದಿನ ಅಭಿಪ್ರಾಯಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಆಕ್ಸ್ಫರ್ಡ್ ವಿವಿಯ ತಂಡವೊಂದು ವೀಕ್ಷಣೆ ಮತ್ತು ಅನುವಂಶಿಕ ಅಂಕಿಅಂಶ , ಪ್ರಾಥಮಿಕ ಆರೋಗ್ಯ ಕೇಂದ್ರದ ದಾಖಲೆಗಳು, ಕೊರೋನ ಸೋಂಕು ಪರೀಕ್ಷೆಯ ಫಲಿತಾಂಶ, ಆಸ್ಪತ್ರೆಗಳಲ್ಲಿ ದಾಖಲಾಗಿರುವವರ ಅಂಕಿಅಂಶ, ಮರಣ ಪ್ರಮಾಣಪತ್ರಗಳನ್ನು ಆಧರಿಸಿ ಈ ವರದಿ ಸಿದ್ಧಪಡಿಸಿದ್ದು, 2020ರ ಜನವರಿಯಿಂದ ಆಗಸ್ಟ್ವರೆಗೆ 4,21,469 ಕೊರೋನ ಸೋಂಕಿತರ ಮಾಹಿತಿಯನ್ನು ಪರಿಶೀಲಿಸಲಾಗಿದೆ.

 ಇವರಲ್ಲಿ ಶೇ.37% ರಷ್ಟು ಮಂದಿ ಈ ಹಿಂದೆ ಧೂಮಪಾನಿಗಳಾಗಿದ್ದವರು ಮತ್ತು 59% ಮಂದಿ ಧೂಮಪಾನದ ಅಭ್ಯಾಸ ಇಲ್ಲದವರು. ಕೇವಲ ಶೇ.4%ರಷ್ಟು ಮಂದಿ ಮಾತ್ರ ಈಗಲೂ ಧೂಮಪಾನ ಮಾಡುವವರು. ಈಗಲೂ ಧೂಮಪಾನ ಮಾಡುವವರಲ್ಲಿ ಶೇ 71% ರಷ್ಟು ಮಂದಿ ಕಡಿಮೆ ಅಥವಾ ಸಾಧಾರಣ ಪ್ರಮಾಣದಲ್ಲಿ ಧೂಮಪಾನ ಮಾಡುವವರಾಗಿದ್ದು ದಿನಕ್ಕೆ 1ರಿಂದ 19 ಸಿಗರೇಟಿನ ಅಗತ್ಯವಿರುವವರು. ಸುಮಾರು ಶೇ. 29% ರಷ್ಟು ಮಂದಿ ಗರಿಷ್ಟ ದೂಮಪಾನಿಗಳಾಗಿದ್ದು ದಿನಕ್ಕೆ ಕನಿಷ್ಟ 20 ಸಿಗರೇಟು ಸೇದುವವರು.

ಇದುವರೆಗೆ ಧೂಮಪಾನ ಮಾಡಿರದ ವ್ಯಕ್ತಿಗಳಿಗೆ ಹೋಲಿಸಿದರೆ, ಈಗಲೂ ಧೂಮಪಾನ ಮಾಡುವವರು ಕೊರೋನ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವ ಮತ್ತು ಮರಣವನ್ನಪ್ಪುವ ಸಾಧ್ಯತೆ ಶೇ.80%ರಷ್ಟು ಅಧಿಕವಾಗಿದೆ. ಧೂಮಪಾನಕ್ಕೆ ಸಂಬಂಧಸಿದ ಅನುವಂಶಿಕ ಪ್ರವೃತ್ತಿಯು ಸೋಂಕಿಗೆ ಒಳಗಾಗುವ ಸಾಧ್ಯತೆಯನ್ನು 45% ಮತ್ತು ಆಸ್ಪತ್ರೆಗೆ ದಾಖಲಾಗುವ ಅಪಾಯವನ್ನು ಶೇ.60% ರಷ್ಟು ಹೆಚ್ಚಿಸುತ್ತದೆ.
 
ಪರಿಸರಕ್ಕೆ ಒಡ್ಡಿಕೊಳ್ಳುವಿಕೆ ಮತ್ತು ಅನುವಂಶಿಕ ಪ್ರವೃತ್ತಿ ಹಾಗೂ ಅನಾರೋಗ್ಯದ ನಡುವಿರುವ ಸಂಪರ್ಕದ ಬಗ್ಗೆ ದೀರ್ಘಾವಧಿಯಿಂದ ಅಧ್ಯಯನ ಕಾರ್ಯ ನಡೆಸುತ್ತಿರುವ ಯುಕೆ ಬಯೊಬ್ಯಾಂಕ್ನಿಂದ ಈ ಅಂಕಿಅಂಶಗಳನ್ನು ಸಂಗ್ರಹಿಸಲಾಗಿದೆ ಎಂದು ಅಧ್ಯಯನ ವರದಿ ಹೇಳಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top