ಜರ್ಮನಿಯ ಹೈಸ್ಪೀಡ್ ರೈಲಿನಲ್ಲಿ ಚೂರಿ ಇರಿತ: ಹಲವರಿಗೆ ಗಾಯ
ಸಾಂದರ್ಭಿಕ ಚಿತ್ರ
ಬರ್ಲಿನ್,ನ.6: ಜರ್ಮನಿಯ ಹೈಸ್ಪೀಡ್ ರೈಲೊಂದರಲ್ಲಿ ಶನಿವಾರ ಬೆಳಗ್ಗೆ ದುಷ್ಕರ್ಮಿಯೊಬ್ಬ ಚೂರಿಯಿಂದ ಮನಬಂದಂತೆ ಇರಿದು ಹಲವಾರು ಮಂದಿಯನ್ನು ಗಾಯಗೊಳಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ದಾಳಿ ನಡೆದ ಸಂದರ್ಭ ಈ ಹೈಸ್ಪೀಡ್ ರೈಲು ರೆಜೆನ್ಸ್ಬರ್ಗ್ ಹಾಗೂ ನ್ಯೂರೆಂಬರ್ಗ್ ನಗರಗಳ ನಡುವೆ ಈ ರೈಲು ಪ್ರಯಾಣಿಸುತ್ತಿತ್ತು. ಘಟನೆಗೆ ಸಂಬಂಧಿಸಿ ಆರೋಪಿಯೊಬ್ಬನನ್ನು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ದಾಳಿಕೋರನ ಕುರಿತಾಗಿ ಆತನ ಉದ್ದೇಶವೇನಿತ್ತೆಂಬ ಬಗ್ಗೆಯಾಗಲಿ ಈವರೆಗೆ ಯಾವುದೇ ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸಿಲ್ಲ.
Next Story