ಬಗ್ದಾದ್ : ಸಶಸ್ತ್ರ ಡ್ರೋನ್ ಹೊಡೆದುರುಳಿಸಿದ ಭದ್ರತಾ ಪಡೆ
ಸಾಂದರ್ಭಿಕ ಚಿತ್ರ
ಬಗ್ದಾದ್, ಜ.3: ಬಗ್ದಾದ್ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಉದ್ದೇಶಿಸಿದ್ದ 2 ಸಶಸ್ತ್ರ ಡ್ರೋನ್ಗಳನ್ನು ಸೋಮವಾರ ಬೆಳಿಗ್ಗೆ ಹೊಡೆದುರುಳಿಸಿರುವುದಾಗಿ ಸೇನಾಧಿಕಾರಿಗಳು ಹೇಳಿದ್ದಾರೆ.
ಇರಾಕ್ನ ಬಗ್ದಾದ್ ವಿಮಾನ ನಿಲ್ದಾಣದಲ್ಲಿ ಅಮೆರಿಕ ನೇತೃತ್ವದ ಮೈತ್ರಿಪಡೆಯ ಸಿಬಂದಿಗಳು ಉಳಿದುಕೊಂಡಿದ್ದ ಕೊಠಡಿಯ ಆವರಣವನ್ನು ಗುರಿಯಾಗಿಸಿಕೊಂಡು ಈ ಸಶಸ್ತ್ರ ಡ್ರೋನ್ಗಳನ್ನು ರವಾನಿಸಲಾಗಿದೆ. ಡ್ರೋನ್ನಲ್ಲಿ ಸುಧಾರಿತ ಸ್ಪೋಟ ಸಾಧನ ಅಥವಾ ಸುಧಾರಿತ ಕ್ರೂಸ್ ಕ್ಷಿಪಣಿಯನ್ನು ಅಳವಡಿಸಲಾಗಿತ್ತು. ಸೋಮವಾರ ಬೆಳಿಗ್ಗೆ 4:30ಕ್ಕೆ ಈ ದಾಳಿಯ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಮೈತ್ರಿಪಡೆಯ ಅಧಿಕಾರಿ ಹೇಳಿದ್ದಾರೆ.
ಬಗ್ದಾದ್ ವಿಮಾನ ನಿಲ್ದಾಣದ ಕಚೇರಿಯಲ್ಲಿ ಮೈತ್ರಿಪಡೆಯ ಕೆಲ ಸಿಬಂದಿಗಳಿದ್ದಾರೆ. ಇವರು ಸೈನಿಕ ಕಾರ್ಯಾಚರಣೆಯಲ್ಲಿ ಪಾತ್ರ ವಹಿಸುವುದಿಲ್ಲ. ಸೇನಾ ವಾಹನದ ಸಿಬಂದಿ, ಗುತ್ತಿಗೆದಾರರು ಹಾಗೂ ನಾಗರಿಕ ಸಿಬಂದಿ ಇಲ್ಲಿ ನೆಲೆಸಿದ್ದಾರೆ ಎಂದು ಮೂಲಗಳು ಹೇಳಿವೆ.
Next Story