ಹಿಜಾಬ್ ಪ್ರಕರಣ: ತಮ್ಮ ದೇಶಕ್ಕೆ ಬಿಜೆಪಿ ಸದಸ್ಯರಿಗೆ ಪ್ರವೇಶ ನೀಡಬಾರದೆಂದು ಸರ್ಕಾರಕ್ಕೆ ಪತ್ರ ಬರೆದ ಕುವೈತ್ ಸಂಸದರು
-

Photo: Twitter/@MJALSHRIKA
ಕುವೈತ್: ಕರ್ನಾಟಕದಲ್ಲಿ ಹಿಜಾಬ್ ಪ್ರಕರಣದ ಬಗ್ಗೆ ನಡೆಯುತ್ತಿರುವ ವಿವಾದ ಉಲ್ಬಣಿಸುತ್ತಿದ್ದಂತೆ, ಭಾರತದ ಆಡಳಿತರೂಢ ಬಿಜೆಪಿಯ ಯಾವುದೇ ಸದಸ್ಯರು ಕುವೈತ್‌ಗೆ ಪ್ರವೇಶಿಸುವುದನ್ನು ನಿಷೇಧಿಸಬೇಕೆಂದು ಕುವೈತ್ ಸಂಸದ ಡಾ.ಸಲೇಹ್ ಟಿಎಚ್ ಅಲ್-ಮುತೈರಿ ಅವರು ಕುವೈತ್ ಸಂಸತ್ತಿಗೆ ಪತ್ರ ಬರೆದಿದ್ದಾರೆ.
ಪತ್ರಕ್ಕೆ ಹಲವಾರು ಕುವೈತ್ ಸಂಸದರು ಸಹಿ ಮಾಡಿದ್ದಾರೆ. ಭಾರತದ ಆಡಳಿತ ಪಕ್ಷ ಬಿಜೆಪಿಯು ಭಾರತದಲ್ಲಿ ಮುಸ್ಲಿಮರ ಹಕ್ಕುಗಳನ್ನು ದಮನ ಮಾಡುತ್ತಿದೆ ಎಂದು ಪತ್ರದಲ್ಲಿ ಬರೆದಿದ್ದು, ಬಿಜೆಪಿಯ ಯಾವುದೇ ಸದಸ್ಯರು ಕುವೈತ್‌ಗೆ ಪ್ರವೇಶಿಸುವುದನ್ನು ತಕ್ಷಣವೇ ನಿಷೇಧಿಸಬೇಕೆಂದು ಸಂಸದರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕುವೈತ್ ಸರ್ಕಾರವು ಭಾರತದಲ್ಲಿ ನಡೆಯುತ್ತಿರುವ ವಿದ್ಯಾಮಾನವನ್ನು ಗಂಭೀರವಾಗಿ ಗಮನಿಸಬೇಕು. ಭಾರತದಲ್ಲಿ ಮುಸ್ಲಿಮರ ವಿರುದ್ಧದ ದಬ್ಬಾಳಿಕೆ ಕೊನೆಗೊಳ್ಳದ ಹೊರತು ಬಿಜೆಪಿ ಸದಸ್ಯರಿಗೆ ಕುವೈತ್ ಪ್ರವೇಶ ನೀಡಕೂಡದು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.
ಕರ್ನಾಟಕದಲ್ಲಿ ಹಿಜಾಬ್ ಧರಿಸಿ ತರಗತಿಗೆ ಹಾಜರಾಗುವುದನ್ನು ನಿರ್ಬಂಧಿಸಿರುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕುವೈತ್ ಲಾಯರ್ಸ್ ಅಸೋಸಿಯೇಷನ್‌ನ ಮಾನವ ಹಕ್ಕುಗಳು ಮತ್ತು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಕೇಂದ್ರದ ನಿರ್ದೇಶಕಿ ಮತ್ತು ಕುವೈತ್ ಇನ್‌ಸ್ಟಿಟ್ಯೂಟ್ ಫಾರ್ ಪ್ರೊಟೆಕ್ಷನ್ ಮತ್ತು ಲೀಗಲ್ ಸ್ಟಡೀಸ್‌ನ ತರಬೇತಿ ಸಮಿತಿಯ ಸದಸ್ಯೆ ಮೆಜ್ಬೆಲ್ ಅಲ್ ಶ್ರೀಕಾ ಅವರು ಸಂಸದರು ಬರೆದಿರುವ ಪತ್ರದ ಪ್ರತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
“ಕುವೈತ್‌ನ ಪ್ರಭಾವಿ ಸಂಸದರು ಕುವೈತ್‌ಗೆ ಬಿಜೆಪಿ ಸದಸ್ಯರ ಪ್ರವೇಶವನ್ನು ನಿಷೇಧಿಸಬೇಕೆಂದು ಆಗ್ರಹಿಸಿದ್ದಾರೆ. ಮುಸ್ಲಿಂ ಹೆಣ್ಣುಮಕ್ಕಳು ಸಾರ್ವಜನಿಕವಾಗಿ ಕಿರುಕುಳಗೊಳಗಾಗುತ್ತಿದ್ದರೆ ನಾವದನ್ನು ನೋಡಿ ಸುಮ್ಮನಿರಲು ಸಾಧ್ಯವಿಲ್ಲ. ಇದು ಸಮುದಾಯ ಒಂದಾಗಬೇಕಾದ ಸಮಯ” ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.
ಈ ಟ್ವೀಟನ್ನು ರಿಟ್ವೀಟ್ ಮಾಡಿರುವ ತಿರುವನಂತಪುರಂ ಸಂಸದ ಶಶಿ ತರೂರ್, ದೇಶೀಯ ಬೆಳವಣಿಗೆಗಳಿಂದ ಅಂತರಾಷ್ಟ್ರೀಯ ಪರಿಣಾಮಗಲಾಗುತ್ತವೆ. ಭಾರತದಲ್ಲಿ ಇಸ್ಲಾಮೋಫೋಬಿಯಾ ಹೆಚ್ಚುತ್ತಿರುವ ಬಗ್ಗೆ ಹಾಗೂ ಅದರ ವಿರುದ್ಧ ಪ್ರಧಾನಿ ಮೋದಿ ನಿರ್ಣಾಯಕ ಕ್ರಮಗಳನ್ನು ತೆಗೆಯದ ಕುರಿತು ಗಲ್ಫ್ ರಾಷ್ಟ್ರಗಳ ಗೆಳೆಯರಿಂದ ನಾನು ಕೇಳುತ್ತಿದ್ದೇನೆ ಎಂದು ಹೇಳಿದ್ದಾರೆ.
ʼನಾವು ಭಾರತವನ್ನು ಇಷ್ಟಪಡುತ್ತೇವೆ, ಆದರೆ, ನಾವು ನಿಮ್ಮ ಗೆಳೆಯರಾಗಲು ತೊಂದರೆಯಾಗುವಂತೆ ಮಾಡಬೇಡಿʼ ಎಂದು ಹೇಳಿರುವುದನ್ನು ತರೂರ್ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ತನ್ನ ಮಧ್ಯಂತರ ಆದೇಶವನ್ನು ತಪ್ಪಾಗಿ ಜಾರಿಗೊಳಿಸುತ್ತಿರುವ ಬಗ್ಗೆ ಹೈಕೋರ್ಟ್ ಹೇಳಿದ್ದೇನು?
A group of powerful Kuwaiti parliamentarians have demanded the govt. of Kuwait to put an immediate ban on the entry of any member of the ruling BJP of India into Kuwait. We can’t sit back and watch muslim girls being publicly persecuted they said. Time for the Ummah to unite. pic.twitter.com/HbMQ3OpCyN
— المحاميمجبل الشريكة (@MJALSHRIKA) February 17, 2022
Domestic actions have international repercussions. I hear from friends across the Gulf of their dismay at rising Islamophobia in India &the PM’s unwillingness to condemn it, let alone act decisively against it. “We like India.But don’t make it so hard for us to be your friends”. https://t.co/Bj9es8fbfS
— Shashi Tharoor (@ShashiTharoor) February 18, 2022
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.