Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಉಕ್ರೇನ್ ಬಿಕ್ಕಟ್ಟು ಶಮನಕ್ಕೆ ಫ್ರಾನ್ಸ್...

ಉಕ್ರೇನ್ ಬಿಕ್ಕಟ್ಟು ಶಮನಕ್ಕೆ ಫ್ರಾನ್ಸ್ ಅಂತಿಮ ಪ್ರಯತ್ನ: ರಶ್ಯಾ - ಅಮೆರಿಕ ಮಾತುಕತೆಗೆ ವೇದಿಕೆ ಸಜ್ಜು

ವಾರ್ತಾಭಾರತಿವಾರ್ತಾಭಾರತಿ21 Feb 2022 10:57 PM IST
share
ಉಕ್ರೇನ್ ಬಿಕ್ಕಟ್ಟು ಶಮನಕ್ಕೆ ಫ್ರಾನ್ಸ್ ಅಂತಿಮ ಪ್ರಯತ್ನ: ರಶ್ಯಾ - ಅಮೆರಿಕ ಮಾತುಕತೆಗೆ ವೇದಿಕೆ ಸಜ್ಜು

ಕೀವ್, ಫೆ.21: ಉಕ್ರೇನ್ ಗಡಿಯಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ತನ್ನ ಈ ಹಿಂದಿನ ಹೇಳಿಕೆಯನ್ನು ರವಿವಾರ ವಾಪಸು ಪಡೆದಿದ್ದು, ಸೇನಾ ಕವಾಯತಿನ ನೆಪದಲ್ಲಿ ಗಡಿಭಾಗಕ್ಕೆ ಸೋಮವಾರ ಹೆಚ್ಚುವರಿ 30000 ಯೋಧರನ್ನು ರವಾನಿಸಿದೆ. ಇದು ಉಕ್ರೇನ್ ಮೇಲಿನ ಯೋಜಿತ ಆಕ್ರಮಣದ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ ಎಂದು ಅಮೆರಿಕ ಹೇಳಿದೆ.

ಈ ಮಧ್ಯೆ, ಉಕ್ರೇನ್ ವಿವಾದಕ್ಕೆ ರಾಜತಾಂತ್ರಿಕ ಮಾರ್ಗದ ಮೂಲಕ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಅಂತಿಮ ಹಂತದ ಪ್ರಯತ್ನ ನಡೆಸಿರುವ ಫ್ರಾನ್ಸ್ನ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರನ್, ರಶ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಧ್ಯೆ ಮಾತುಕತೆಯ ಪ್ರಸ್ತಾಪವನ್ನು ಮುಂದಿರಿಸಿದ್ದಾರೆ. ಸೈದ್ಧಾಂತಿಕ ರೀತಿಯ ಮಾತುಕತೆಗೆ ಬೈಡನ್ ಒಪ್ಪಿದ್ದಾರೆ ಎಂದು ಶ್ವೇತಭವನದ ಮೂಲಗಳು ಹೇಳಿವೆ. ಉಕ್ರೇನ್ ಮೇಲಿನ ದಾಳಿಗೆ ಅಂತಿಮ ಹಂತದ ಸಿದ್ಧತೆ ಪೂರ್ಣಗೊಳಿಸುವಂತೆ ರಶ್ಯಾ ಅಧ್ಯಕ್ಷ ಪುಟಿನ್ ಮುಂಚೂಣಿ ನೆಲೆಯ ಕಮಾಂಡರ್ಗಳಿಗೆ ಆದೇಶಿಸಿದ್ದಾರೆ ಎಂದು ಗುಪ್ತಚರ ವರದಿ ಲಭಿಸಿರುವುದಾಗಿ ಅಮೆರಿಕ ಹೇಳಿದೆ.
 
ಈ ಮಧ್ಯೆ, ಉಕ್ರೇನ್ನಲ್ಲಿ ರವಿವಾರದ ಜನಜೀವನ ಎಂದಿನಂತೆ ಸಹಜವಾಗಿತ್ತು. ಚರ್ಚ್ಗಳಲ್ಲಿ ರವಿವಾರದ ಪ್ರಾರ್ಥನೆ ಸಂದರ್ಭ ದೇಶದಲ್ಲಿ ಶಾಂತಿ ನೆಲೆಸುವಂತೆ ಮತ್ತು ಯುದ್ಧದ ಭೀತಿ ದೂರವಾಗುವಂತೆ ಪ್ರಾರ್ಥನೆ ಸಲ್ಲಿಸಿದರು. ಉಕ್ರೇನ್ನ ಉತ್ತರದ ಗಡಿಯಲ್ಲಿರುವ ಬೆಲಾರೂಸ್ನಲ್ಲಿ ರಶ್ಯಾ ನಡೆಸುತ್ತಿದ್ದ ಸೇನಾ ಕವಾಯತು ರವಿವಾರ ಅಂತ್ಯಗೊಳ್ಳಬೇಕಿತ್ತು. ಆದರೆ ಅದನ್ನು ಇನ್ನಷ್ಟು ದಿನಕ್ಕೆ ವಿಸ್ತರಿಸಲಾಗಿದೆ ಎಂದು ರಶ್ಯಾ ಹೇಳಿಕೆ ನೀಡಿದ್ದು, ಹೆಚ್ಚುವರಿಯಾಗಿ 30,000 ಯೋಧರನ್ನು ಬೆಲಾರೂಸ್ಗೆ ರವಾನಿಸಿದೆ. ಉಕ್ರೇನ್ ರಾಜಧಾನಿ ಕೀವ್ಗೆ ಅತೀ ಸನಿಹದಲ್ಲಿರುವ ಬೆಲಾರೂಸ್ನಲ್ಲಿ ಬೃಹತ್ ಸಂಖ್ಯೆಯಲ್ಲಿ ರಶ್ಯಾದ ಸೇನೆ ಜಮಾವಣೆ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಉಕ್ರೇನ್ನ ಗಡಿಭಾಗದಲ್ಲಿ ರಶ್ಯಾ ಟ್ಯಾಂಕ್, ಯುದ್ಧವಿಮಾನ, ಫಿರಂಗಿ ದಳ ಇತ್ಯಾದಿಗಳ ಜತೆಗೆ 1,50,000ಕ್ಕೂ ಅಧಿಕ ಯೋಧರನ್ನು ನೆಲೆಗೊಳಿಸಿದೆ. 

ಮಾತುಕತೆಗೆ ಅಮೆರಿಕದ ಷರತ್ತು

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಮತ್ತು ರಶ್ಯಾದ ವಿದೇಶ ಸಚಿವ ಸೆರ್ಗೆಯ್ ಲಾವ್ರೋವ್ ಯುರೋಪ್ನಲ್ಲಿ ಗುರುವಾರ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಆದರೆ, ಅದುವರೆಗೆ ರಶ್ಯಾ ಉಕ್ರೇನ್ ಮೇಲೆ ಆಕ್ರಮಣ ನಡೆಸಬಾರದು ಎಂಬ ಷರತ್ತು ಅನ್ವಯಿಸುತ್ತದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಹೇಳಿದ್ದಾರೆ.
ನಾವು ಯಾವತ್ತೂ ರಾಜತಾಂತ್ರಿಕ ಕ್ರಮಗಳಿಗೆ ಸಿದ್ಧವಿದ್ದೇವೆ. ಆದರೆ ರಶ್ಯಾವು ಯುದ್ಧದ ಆಯ್ಕೆಯನ್ನು ಬಯಸಿದರೆ ಕಠಿಣ ಮತ್ತು ಕ್ಷಿಪ್ರ ಪ್ರತಿಕ್ರಮಕ್ಕೂ ಸಿದ್ಧವಿದ್ದೇವೆ . ಈಗಿನ ಪರಿಸ್ಥಿತಿ ಗಮನಿಸಿದರೆ ರಶ್ಯಾವು ಉಕ್ರೇನ್ ಮೇಲೆ ಅತೀ ಶೀಘ್ರದಲ್ಲಿ ಪೂರ್ಣಪ್ರಮಾಣದ ಪ್ರಹಾರಕ್ಕೆ ಸಿದ್ಧತೆ ಮುಂದುವರಿಸಿರುವಂತೆ ಕಾಣುತ್ತದೆ ಎಂದವರು ಹೇಳಿದ್ದಾರೆ.

ಉಕ್ರೇನ್ ನಲ್ಲಿ ಹತ್ಯೆ ಮಾಡಬೇಕಿರುವ ಜನರ ಪಟ್ಟಿ ಸಿದ್ಧಪಡಿಸಿರುವ ರಶ್ಯಾ ವಿಶ್ವಸಂಸ್ಥೆಗೆ ಅಮೆರಿಕ ಪತ್ರ

ಉಕ್ರೇನ್ ಮೇಲೆ ಆಕ್ರಮಣ ನಡೆದರೆ ‘ಕೊಲ್ಲಬೇಕಿರುವ ಅಥವಾ ಬಂಧನ ಶಿಬಿರಕ್ಕೆ ರವಾನಿಸುವ’ ಉಕ್ರೇನ್ ಪ್ರಜೆಗಳ ಪಟ್ಟಿಯನ್ನು ರಶ್ಯಾ ಸಿದ್ಧಪಡಿಸಿಕೊಂಡಿದೆ ಎಂಬ ಮಾಹಿತಿ ಲಭಿಸಿದೆ ಎಂದು ವಿಶ್ವಸಂಸ್ಥೆಗೆ ಬರೆದಿರುವ ಪತ್ರದಲ್ಲಿ ಅಮೆರಿಕ ಎಚ್ಚರಿಸಿದೆ.

ವಿಶ್ವಸಂಸ್ಥೆಯ ಮಾನವಹಕ್ಕು ಸಮಿತಿಯ ಹೈಕಮಿಷನರ್ ಮೈಕೆಲ್ ಬ್ಯಾಚಲೆಟ್ ಅವರಿಗೆ ಅಮೆರಿಕ ಈ ಪತ್ರದ ಮೂಲಕ ಎಚ್ಚರಿಕೆಯ ಸಂದೇಶ ರವಾನಿಸಿದೆ ಎಂದು ಎಪಿಎಫ್ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.

ಉಕ್ರೇನ್ ಗಡಿಭಾಗದಲ್ಲಿ ಜಮಾವಣೆಗೊಂಡಿರುವ ರಶ್ಯಾದ ಪಡೆಗಳು ಉಕ್ರೇನ್ ಮೇಲೆ ಶೀಘ್ರದಲ್ಲೇ ಆಕ್ರಮಣ ನಡೆಸಲಿವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದ್ದು ರಶ್ಯಾದ ಪಡೆಗಳಿಂದ ಉಕ್ರೇನ್ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಸಾಧ್ಯತೆ ನಿಚ್ಚಳವಾಗಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ. ಸೇನಾ ಆಕ್ರಮಣದ ಬಳಿಕ, ಉಕ್ರೇನ್ನಲ್ಲಿ ಹತ್ಯೆ ಮಾಡಬೇಕಿರುವ ಅಥವಾ ಬಂಧನ ಶಿಬಿರಕ್ಕೆ ರವಾನಿಸಬೇಕಿರುವ ಜನರ ಪಟ್ಟಿಯನ್ನೂ ರಶ್ಯಾ ಸಿದ್ಧಪಡಿಸಿರುವುದಾಗಿ ನಮಗೆ ವಿಶ್ವಾಸಾರ್ಹ ಮಾಹಿತಿ ಲಭಿಸಿದೆ. 

ಅಲ್ಲದೆ, ಅತಿಕ್ರಮಣವನ್ನು ವಿರೋಧಿಸಿ ಜನತೆ ನಡೆಸಲಿರುವ ಶಾಂತಿಯುತ ಪ್ರತಿಭಟನೆ ಅಥವಾ ಜಾಥಾವನ್ನು ಚದುರಿಸಲು ರಶ್ಯಾದ ಪಡೆ ಮಾರಕ ಕ್ರಮಗಳನ್ನು ಬಳಸುವ ಸಾಧ್ಯತೆಯ ಬಗ್ಗೆಯೂ ವಿಶ್ವಾಸಾರ್ಹ ಮಾಹಿತಿ ಲಭಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆಕ್ರಮಣದ ಬಳಿಕ ಅಪಹರಣ, ಚಿತ್ರಹಿಂಸೆ, ರಾಜಕೀಯ , ಧಾರ್ಮಿಕ ವಿರೋಧಿಗಳ ಬಂಧನ, ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ದೌರ್ಜನ್ಯ ಮುಂತಾದ ಅಕ್ರಮಗಳು ನಡೆಯಬಹುದು ಎಂದು ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿ ಬ್ಯಾಷೆಬಾ ನೆಲ್ ಕ್ರಾಕರ್ ಸಹಿ ಹಾಕಿರುವ ಪತ್ರದಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ. ತಿಳಿಸಿದೆ.

ಯುರೋಪ್ ನಲ್ಲಿ ಯುದ್ಧದ ನಿಜವಾದ ಸಾಧ್ಯತೆಯಿದೆ: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್

ಯುರೋಪ್ ನಲ್ಲಿ ಯುದ್ಧದ ನಿಜವಾದ ಸಾಧ್ಯತೆ ನಿಚ್ಚಳವಾಗಿದ್ದು ಯುರೋಪ್ ನ ಭದ್ರತೆಗೆ ತೀವ್ರ ಬೆದರಿಕೆ ಎದುರಾಗಿದೆ ಎಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ.

ಜರ್ಮನಿಯ ಮ್ಯೂನಿಚ್ನಲ್ಲಿ ನಡೆದ ಭದ್ರತಾ ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದರು. ನಾವು ಯುರೋಪ್ನಲ್ಲಿ ಯುದ್ಧದ ಸಂಭವನೀಯತೆಯ ಬಗ್ಗೆ ಮಾತನಾಡುತ್ತಿದ್ದೇವೆ. ನಾವು ಮಾತನಾಡುತ್ತಿರುವ ವಿಷಯದ ಮಹತ್ವದ ಬಗ್ಗೆ ಅರ್ಥ ಮಾಡಿಕೊಳ್ಳಬೇಕು. ಯುರೋಪ್ ಎರಡನೇ ಮಹಾಯುದ್ಧದ ಬಳಿಕದ ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲಿದೆ. ಕಳೆದ 70 ವರ್ಷಗಳಲ್ಲಿ ಈ ವಲಯದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸಿದೆ. ಈಗ ಯುರೋಪ್ನಲ್ಲಿ ಯುದ್ಧದ ನಿಜವಾದ ಸಾಧ್ಯತೆ ಎದುರಾಗಿದ್ದು ಇದೊಂದು ನಿರ್ಣಾಯಕ ಕ್ಷಣವಾಗಿದೆ ಎಂದು ಹ್ಯಾರಿಸ್ ಹೇಳಿದರು.
 
ಉಕ್ರೇನ್ ಮೇಲೆ ರಶ್ಯಾ ಆಕ್ರಮಣ ನಡೆಸಿದರೆ, ರಶ್ಯಾದ ವಿರುದ್ಧ ಕೈಗೊಳ್ಳಬಹುದಾದ ಕಠಿಣ ನಿರ್ಬಂಧ ಕ್ರಮಗಳ ಸಹಿತ ಇತರ ಕ್ರಮಗಳ ಬಗ್ಗೆ ಕಮಲಾ ಹ್ಯಾರಿಸ್ ಅವರು ಅಮೆರಿಕದ ಮಿತ್ರರಾಷ್ಟ್ರಗಳ ಜತೆ ಚರ್ಚೆ ನಡೆಸಿದರು. ರಶ್ಯಾದ ವಿರುದ್ಧ ವಿಧಿಸುವ ನಿರ್ಬಂಧಗಳು ಅಮೆರಿಕದ ಮೇಲೂ ಪರಿಣಾಮ ಬೀರಲಿವೆ. ಇಂಧನ ಕ್ಷೇತ್ರಕ್ಕೆ ಸಂಬಂಧಿಸಿ ಅಮೆರಿಕದ ಮೇಲೆ ತುಸುಮಟ್ಟಿನ ಪರಿಣಾಮ ಉಂಟಾಗಲಿದೆ ಎಂದವರು ಹೇಳಿದ್ದಾರೆ.

ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆಂಸ್ಕಿ, ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ಡರ್ ಲೆಯೆನ್, ನೇಟೊ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟಾಲ್ಟನ್ಬರ್ಗ್, ಜರ್ಮನ್ ಛಾನ್ಸಲರ್ ಒಲಾಫ್ ಶೋಲ್ಝ್, ಗ್ರೀಸ್ ಪ್ರಧಾನಿ ಕಿರಿಯಾಕೊಸ್ ಮಿತ್ಸೊಟಕಿಸ್ ಜತೆ ಅವರು ವಿಸ್ತತ ಮಾತುಕತೆ ನಡೆಸಿದ್ದಾರೆ.

ರಶ್ಯಾದ ಆಕ್ರಮಣದವರೆಗೆ ಕಾಯದೆ, ತಕ್ಷಣವೇ ಆ ದೇಶದ ವಿರುದ್ಧ ನಿರ್ಬಂಧ ಜಾರಿಗೊಳಿಸಬೇಕು. ಉಕ್ರೇನ್ ಪತನಗೊಂಡ ಬಳಿಕ ರಶ್ಯಾದ ಮೇಲೆ ನಿರ್ಬಂಧ ಜಾರಿಗೊಳಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಉಕ್ರೇನ್ ಅಧ್ಯಕ್ಷ ಝೆಲೆಂಸ್ಕಿ ಅವರ ಆಗ್ರಹದ ಬಗ್ಗೆ ಪ್ರತಿಕ್ರಿಯಿಸಿದ ಹ್ಯಾರಿಸ್, ದೇಶದ ಭದ್ರತೆಯ ಕುರಿತ ಅವರ ಆತಂಕವನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ನಿರ್ಬಂಧಗಳ ಉದ್ದೇಶ ಯಾವತ್ತೂ ತಡೆಗಟ್ಟುವುದಾಗಿದೆ ಎಂದು ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X