ಅಮೆರಿಕದ ಸೇನಾ ವಿಮಾನ ನಾರ್ವೆಯಲ್ಲಿ ಪತನ: 4 ಮಂದಿ ಮೃತ್ಯು
ಓಸ್ಲೊ, ಮಾ.19: ನೇಟೊ ಪಡೆಗಳ ಕವಾಯತಿನಲ್ಲಿ ಪಾಲ್ಗೊಂಡಿದ್ದ ಅಮೆರಿಕದ ವಿಮಾನ ನಾರ್ವೆಯಲ್ಲಿ ಪತನಗೊಂಡಿದ್ದು ಅದರಲ್ಲಿದ್ದ ನಾಲ್ವರು ಅಮೆರಿಕನ್ನರು ಮೃತಪಟ್ಟಿರುವುದಾಗಿ ನಾರ್ವೆಯ ಸೇನೆಯ ಹೇಳಿಕೆ ತಿಳಿಸಿದೆ. ಅಮೆರಿಕದ ಸಮುದ್ರ ಪಡೆಗೆ ಸೇರಿದ ವಿ-228 ಓಸ್ಪ್ರೆ ವಿಮಾನವು ನಾರ್ವೆಯಲ್ಲಿ ನೇಟೊ ಹಾಗೂ ಇತರ ಸಹದೇಶಗಳ 30,000 ಯೋಧರು ನಡೆಸುತ್ತಿದ್ದ ಕವಾಯತಿನಲ್ಲಿ ಪಾಲ್ಗೊಂಡಿದ್ದ ಸಂದರ್ಭ ಶುಕ್ರವಾರ ನಾಪತ್ತೆಯಾಗಿತ್ತು. ನಾರ್ಡ್ಲ್ಯಾಂಡ್ ಕೌಂಟಿಯಲ್ಲಿ ವಿಮಾನ ಅಪಘಾತಕ್ಕೀಡಾಗಿರುವ ಬಗ್ಗೆ ಶನಿವಾರ ಮಾಹಿತಿ ಲಭಿಸಿದೆ. ವಿಮಾನದಲ್ಲಿದ್ದ ನಾಲ್ವರು ಅಮೆರಿಕನ್ನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ದುರ್ಘಟನೆ ಸಂಭವಿಸಿರುವುದನ್ನು ಅಮೆರಿಕದ ಸಾಗರ ಪಡೆ ದೃಢಪಡಿಸಿದೆ. ಸಮರಾಭ್ಯಾಸದ ಸಂದರ್ಭ ವಿಮಾನ ಪತನಗೊಂಡಿದ್ದು ನಾರ್ವೆಯ ಅಧಿಕಾರಿಗಳು ಶೋಧ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಸಾಗರ ಪಡೆಯ ಹೇಳಿಕೆ ತಿಳಿಸಿದೆ.
Next Story