Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ರಶ್ಯ ಸೇನೆಯಿಂದ ಮಾರಿಯುಪೊಲ್ ನಗರಕ್ಕೆ...

ರಶ್ಯ ಸೇನೆಯಿಂದ ಮಾರಿಯುಪೊಲ್ ನಗರಕ್ಕೆ ದಿಗ್ಬಂಧನ; ಮರು ನಿಯಂತ್ರಣಕ್ಕೆ ಉಕ್ರೇನ್ ಸೇನೆಯ ಹೋರಾಟ

ವಾರ್ತಾಭಾರತಿವಾರ್ತಾಭಾರತಿ12 April 2022 11:28 PM IST
share
ರಶ್ಯ ಸೇನೆಯಿಂದ ಮಾರಿಯುಪೊಲ್ ನಗರಕ್ಕೆ ದಿಗ್ಬಂಧನ; ಮರು ನಿಯಂತ್ರಣಕ್ಕೆ ಉಕ್ರೇನ್ ಸೇನೆಯ ಹೋರಾಟ

ಮಾರಿಯುಪೊಲ್, ಎ.12: ಉಕ್ರೇನ್ ನ ಪ್ರಮುಖ ನಗರವಾದ ಮಾರಿಯುಪೋಲ್ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶ ಹೊಂದಿರುವ ರಶ್ಯದ ಪಡೆಗಳು ಪೂರ್ವ ಉಕ್ರೇನ್ ನಾದ್ಯಂತ ಭೀಕರ ದಾಳಿಯನ್ನು ಮುಂದುವರಿಸಿದ್ದು, ಅವುಗಳನ್ನು ಹಿಮ್ಮೆಟ್ಟಿಸಲು ಉಕ್ರೇನ್ ಸೇನೆ ಶತಾಯಗತಾಯ ಯತ್ನಿಸುತ್ತಿದೆ.

ರಶ್ಯವು ತಾನು ಅತಿಕ್ರಮಿಸಿರುವ ಕ್ರಿಮಿಯಾ ಪ್ರಾಂತವನ್ನು ಮಾಸ್ಕೊ ಬೆಂಬಲಿತ ಪ್ರತ್ಯೇಕತವಾದಿಗಳ ನಿಯಂತ್ರಣದಲ್ಲಿರುವ  ಡೊನೆಟ್ಸ್ಕಗೂ ಲುಗಾನ್ಸ್ಕ್ ಪ್ರಾಂತಗಳೊಂದಿಗೆ ಸಂಪರ್ಕಿಸಲು ಯತ್ನಿಸುತ್ತಿದೆ. ಈ ಪ್ರದೇಶದಲ್ಲಿನ 4 ಲಕ್ಷಕ್ಕೂ ಅಧಿಕ ಜನಸಂಖ್ಯೆಯಿರುವ ನಗರವಾದ ಮಾರಿಯುಪೊಲ್ ಮೇಲೆ ಸಂಪೂರ್ಣಗೆ ರಶ್ಯನ್ ಸೇನೆ ಸಂಪೂರ್ಣ ದಿಗ್ಬಂಧನ ವಿಧಿಸಿದೆ.

‘ಭವಿಷ್ಯದಲ್ಲಿ ಶತ್ರುವು ಮಾರಿಯುಪೊಲ್ ನಗರದ ಮೇಲೆ ನಿಯಂತ್ರಣ ಸಾಧಿಸಲು ಯತ್ನಿಸುವ ಮತ್ತು ಪೊಪಾಸ್ನಾ ನಗರವನ್ನು ವಶಪಡಿಸಿಕೊಳ್ಳುವ ಸಾಧ್ಯತೆಯಿದೆ. ಡೊನೆಟ್ಸ್ಕ್ ಪ್ರಾಂತ್ಯದ ಆಡಳಿತಾತ್ಮಕ ಗಡಿಗಳನ್ನು ತಲುಪುವ ಉದ್ದೇಶದಿಂದ ಕುರಾಕ್ಹೋವ್ ನೆಡೆಗೆ ಆಕ್ರಮಣವನ್ನು ಆರಂಭಿಸಲಿದೆ’ ಎಂದು ಉಕ್ರೇನ್ ಸಶಸ್ತ್ರಪಡೆಗಳ ಮಹಾಸಿಬ್ಬಂದಿ ಫೇಸ್ಬುಕ್ ನಲ್ಲಿ ತಿಳಿಸಿದ್ದಾರೆ.

ಮಾರಿಯುಪೊಲ್ ಗೆ ರಶ್ಯನ್ ಸೇನೆ ವಿಧಿಸಿರುವ ದಿಗ್ಬಂಧನವನ್ನು ಮುರಿಯುವ ಉದ್ದೇಶದಿಂದ ಉಕ್ರೇನ್ ಸೇನೆ ನಡೆಸಿದ ವಾಯುದಾಳಿ ಹಾಗೂ ಫಿರಂಗಿ ದಾಳಿಯನ್ನು ತಾನು ಹಿಮ್ಮೆಟ್ಟಿಸಿರುವುದಾಗಿ ರಶ್ಯದ ರಕ್ಷಣಾ ಸಚಿವಾಲಯ ತಿಳಿಸಿದೆ.

ಆದಾಗ್ಯೂ ಉಕ್ರೇನ್ ಸೇನೆಯು ಮಾರಿಯೊಪೊಲ್ ನಗರವನ್ನು ರಕ್ಷಿಸುವ ಕಾರ್ಯ ಮುಂದುವರಿದಿಯೆಂದು ಹೇಳಿದೆ. ಮಾರಿಯುಪೊಲ್ ನಗರವನ್ನು ವೀರೋಚಿತವಾಗಿ ಹಿಡಿತದಲ್ಲಿಟ್ಟುಕೊಂಡಿರುವ ಉಕ್ರೇನ್ ಪಡೆಗಳ ಜೊತೆಗಿನ ಸಂಪರ್ಕವನ್ನು ಸ್ಥಿರವಾಗಿ ಕಾಪಾಡಿಕೊಳ್ಳಲಾಗಿದೆ ಎಂದು ಉಕ್ರೇನ್ ಭೂಸೇನೆಯು, ಟೆಲಿಗ್ರಾಂ ‘ಸಾಮಾಜಿಕ ಜಾಲತಾಣ’ದಲ್ಲಿ ಪ್ರಕಟಿಸಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಸೋಮವಾರ ರಾತ್ರಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿಕೆಯೊಂದನ್ನು ನೀಡಿ ಮಾರಿಯುಪೊಲ್ ನಗರದ ರಕ್ಷಣೆಯನ್ನು ಬಲಪಡಿಸಲು ಇನ್ನೂ ಅಧಿಕ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುವಂತೆ ಮಿತ್ರರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ.

‘ನಮ್ಮ ನೆಲದಲ್ಲಿರುವ ಶತ್ರುವನ್ನು ಸಂಪೂರ್ಣವಾಗಿ ನಾಶಪಡಿಸಲು ಅದರಲ್ಲೂ ವಿಶೇಷವಾಗಿ ಮಾರಿಯುಪೊಲ್ ನಗರವನ್ನು ದಿಗ್ಬಂಧನದಿಂದ ಮುಕ್ತಗೊಳಿಸಲು ಮತ್ತು ಈ ಯುದ್ಧವನ್ನು ಶೀಘ್ರದಲ್ಲೇ ಕೊನೆಗೊಳಿಸಲು ಬೇಕಾಗುವಷ್ಟು ಶಸ್ತ್ರಾಸ್ತ್ರಗಳು ನಮಗೆ ದೊರೆಯುತ್ತಿಲ್ಲ. ಎಂದು ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಡಿದ ಭಾಷಣದಲ್ಲಿ ತಿಳಿಸಿದ್ದಾರೆ.

ಸೋಮವಾರ ಬೆಳಗ್ಗೆ ದಕ್ಷಿಣ ಕೊರಿಯದ ಸಂಸತ್ ಸದಸ್ಯರನ್ನು ಉದ್ದೇಶಿಸಿ ವರ್ಚುವಲ್ ಭಾಷಣ ಮಾಡಿದ ಝೆಲೆನ್ಸ್ಕಿ ಅವರು ರಶ್ಯವು ಮಾರಿಯುಪೊಲ್ ನಗರವನ್ನು ಸಂಪೂರ್ಣವಾಗಿ ನಾಶಪಡಿಸಿದೆ ಹಾಗೂ ಅದನ್ನು ಸುಟ್ಟು ಭಸ್ಮಮಾಡಿದೆ ಮತ್ತು ಹತ್ತು ಸಾವಿರಕ್ಕೂ ಅಧಿಕ ಮಂದಿಯನ್ನು ಹತ್ಯೆಗೈದಿದೆ ಎಂದರು.

ಮಾರಿಯುಪೊಲ್ ನಗರದಲ್ಲಿ ರಶ್ಯದಿಂದ ರಾಸಾಯನಿಕ ಅಸ್ತ್ರ ದಾಳಿ?

ರಶ್ಯವು ಮಾರಿಯುಪೊಲ್ ನಗರದ ಮೇಲೆ ರಾಸಾಯನಿಕ ಅಸ್ತ್ರ ದಾಳಿಯನ್ನು ನಡೆಸಿದೆಯೆಂಬ ವರದಿಗಳ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಬ್ರಿಟನ್ ಸೋಮವಾರ ತಿಳಿಸಿದೆ.

ಉಕ್ರೇನ್ ಸಮರವು ಏಳನೇ ವಾರಕ್ಕೆ ಕಾಲಿರಿಸಿರುವಂತೆಯೇ, ರಶ್ಯವು ರಾಸಾಯಿಕ ಅಸ್ತ್ರ ಪ್ರಯೋಗದಂತಹ ದುಸ್ಸಾಹಸಕ್ಕೆ ಕೈಹಾಕುವ ಸಾಧ್ಯತೆಯಿದೆಯೆಂದು ಪಾಶ್ಚಾತ್ಯ ರಾಷ್ಟ್ರಗಳ ಅಧಿಕಾರಿಗಳು ಈ ಮೊದಲೇ ಆತಂಕ ವ್ಯಕ್ತಪಡಿಸಿದ್ದರು.
ರಶ್ಯ ಅಜ್ಞಾತವಾದ ದ್ರವ್ಯವೊಂದನ್ನು ದಾಳಿಯಲ್ಲಿ ಬಳಸಿದ್ದು, ಇದರಿಂದಾಗಿ ಜನರು ಶ್ವಾಸಕೋಶದ ವೈಫಲ್ಯದಿಂದ ಬಳುತ್ತಿದ್ದಾರೆಂದು ರಶ್ಯದ ಸಂಸದೆ ಇವಾನ್ನಾ ಕಿಂಪುಶ್ ತಿಳಿಸಿದ್ದಾರೆ. ಆದರೆ ಉಕ್ರೇನ್ ಉಪರಕ್ಷಣಾ ಸಚಿವೆ ಗಾನ್ನಾ ಮಲ್ಲಾರ್ ಅವರು ರಶ್ಯನವು ಫಾಸ್ಪರಸ್ ಮ್ಯೂನಿಶನ್ಸ್ ಎಂಬ ರಾಸಾಯಕದ ಮೂಲಕ ದಾಳಿ ನಡೆಸಿರುವ ಸಾಧ್ಯತೆಯಿದೆಯೆಂದು ಸಂದೇಹ ವ್ಯಕ್ತಪಡಿಸಿದ್ದಾರೆ.

ಪೂರ್ವ ಉಕ್ರೇನ್ ಪ್ರತ್ಯೇಕತಾವಾದಿ ಪ್ರಾಂತವಾದ ಡೊನೆಟ್ಸ್ಕ್ನ ಹಿರಿಯ ಅಧಿಕಾರಿ ಎಡ್ವಾರ್ಡ್ ಬಬಾಸುರಿನ್ ಅವರು ಮಾರಿಯುಪೊಲ್ ನಗರದಲ್ಲಿ ಯಾವುದೇ ರಾಸಾಯನಿಕ ಅಸ್ತ್ರಗಳು ಬಳಕೆಯಾಗಿರುವ ಸಾಧ್ಯತೆಯಿಲ್ಲವೆಂದು ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X