ಕೀವ್ ಸಮೀಪ 900ಕ್ಕೂ ಅಧಿಕ ಮೃತದೇಹ ಪತ್ತೆ
ಕೀವ್, ಎ.16: ರಶ್ಯ ಸೇನೆಯ ನಿರಂತರ ಆಕ್ರಮಣಕ್ಕೆ ಒಳಗಾಗಿರುವ ಉಕ್ರೇನ್ ರಾಜಧಾನಿ ಕೀವ್ ಸುತ್ತಮುತ್ತಲಿನ ಪ್ರದೇಶದಲ್ಲಿ 900ಕ್ಕೂ ಅಧಿಕ ಮೃತದೇಹ ಪತ್ತೆಯಾಗಿರುವುದಾಗಿ ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.
ಈ ಪ್ರದೇಶದಿಂದ ರಶ್ಯ ಸೇನೆ ಇತ್ತೀಚೆಗೆ ಹಿಂದೆ ಸರಿದಿದೆ. ಈ ಪ್ರದೇಶದಲ್ಲಿ ರಶ್ಯ ಸೇನೆ ನಾಗರಿಕರನ್ನು ಹತ್ಯೆ ಮಾಡಿದೆ. ಬುಚಾ ನಗರದಲ್ಲೇ ಕನಿಷ್ಟ 350 ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮೃತದೇಹಗಳು ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದವು ಅಥವಾ ಅರೆಬರೆ ಹೂತು ಹಾಕಲಾಗಿತ್ತು. ಮೃತಪಟ್ಟವರಲ್ಲಿ 95%ದಷ್ಟು ಮಂದಿ ಗುಂಡಿನ ಗಾಯ ಹೊಂದಿದ್ದರು ಎಂದು ಪೊಲೀಸ್ ಮುಖ್ಯಸ್ಥ ಆ್ಯಂಡ್ರಿಯ್ ನೆಬಿಟೊವ್ ಹೇಳಿದ್ದಾರೆ.
ಕಟ್ಟಡದ ಅವಶೇಷಗಳಡಿ ಇನ್ನಷ್ಟು ಮೃತದೇಹ ಪತ್ತೆಯಾಗುವ ಸಾಧ್ಯತೆಯಿದೆ. ಉಕ್ರೇನ್ ಪರ ನಿಲುವು ಹೊಂದಿರುವವರನ್ನು ರಶ್ಯ ಸೇನೆ ಹುಡುಕಿ ಹುಡುಕಿ ಹತ್ಯೆ ಮಾಡಿದೆ ಎಂದವರು ಹೇಳಿದ್ದಾರೆ.
Next Story