Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಕ್ಲಿನಿಕಲ್ ಟ್ರಯಲ್‍ನಲ್ಲಿ ಭಾಗವಹಿಸಿದ್ದ...

ಕ್ಲಿನಿಕಲ್ ಟ್ರಯಲ್‍ನಲ್ಲಿ ಭಾಗವಹಿಸಿದ್ದ ಎಲ್ಲಾ 18 ರೋಗಿಗಳೂ ಕ್ಯಾನ್ಸರ್ ಮುಕ್ತ: ವೈದ್ಯಕೀಯ ಜಗತ್ತಿನಲ್ಲಿಯೇ ಪ್ರಥಮ

ವಾರ್ತಾಭಾರತಿವಾರ್ತಾಭಾರತಿ7 Jun 2022 5:53 PM IST
share
ಕ್ಲಿನಿಕಲ್ ಟ್ರಯಲ್‍ನಲ್ಲಿ ಭಾಗವಹಿಸಿದ್ದ ಎಲ್ಲಾ 18 ರೋಗಿಗಳೂ ಕ್ಯಾನ್ಸರ್ ಮುಕ್ತ: ವೈದ್ಯಕೀಯ ಜಗತ್ತಿನಲ್ಲಿಯೇ ಪ್ರಥಮ

ನ್ಯೂಯಾರ್ಕ್: ಅತಿ ಸಣ್ಣ ಕ್ಲಿನಿಕಲ್ ಟ್ರಯಲ್ ಒಂದರಲ್ಲಿ ಭಾಗವಹಿಸಿದ್ದ ಗುದನಾಳದ ಕ್ಯಾನ್ಸರ್‍ನಿಂದ ಬಳಲುತ್ತಿದ್ದ 18 ರೋಗಿಗಳು ಕ್ಯಾನ್ಸರ್ ಮುಕ್ತರಾಗಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಈ ರೋಗಿಗಳು  ಸುಮಾರು ಆರು ತಿಂಗಳು ಕಾಲ ಡೋಸ್ಟರ್‍ಲಿಮಾಬ್ ಎಂಬ ಔಷಧಿಯನ್ನು ಸೇವಿಸಿದ್ದು ಅಂತ್ಯದಲ್ಲಿ ಅವರ ದೇಹದಲ್ಲಿದ್ದ ಕ್ಯಾನ್ಸರ್ ಗೆಡ್ಡೆ ಮಾಯವಾಗಿದೆ ಎಂದು ವರದಿಯಾಗಿದ್ದು ಕ್ಯಾನ್ಸರ್ ಮುಕ್ತರಾಗಿದ್ದುದಕ್ಕೆ ಕ್ಲಿನಿಕಲ್ ಟ್ರಯಲ್‍ನಲ್ಲಿ ಭಾಗವಹಿಸಿದವರೆಲ್ಲರೂ ಖುಷಿಪಟ್ಟಿದ್ದಾರೆ.

ಮಾನವ ದೇಹದಲ್ಲಿರುವ ರೋಗ ಪ್ರತಿಕಾಯಗಳಿಗೆ ಪರ್ಯಾಯವಾಗಿವ ಲ್ಯಾಬ್ ಉತ್ಪಾದಿತ ಮಾಲಿಕ್ಯೂಲ್‍ಗಳನ್ನು ಈ ಔಷಧಿ ಹೊಂದಿದೆ. ಎಲ್ಲಾ ರೋಗಿಗಳಿಗೂ ಅದೇ ಔಷಧಿ ನೀಡಲಾಗಿದ್ದು ಅಂತಿಮವಾಗಿ ಅವರ ತಪಾಸಣೆ ನಡೆಸಿದಾಗ ಎಂಡೋಸ್ಕೋಪಿ, ಪೊಸಿಟ್ರಾನ್ ಎಮಿಶನ್ ಟೊಮೋಗ್ರಾಫಿ ಅಥವಾ ಪೆಟ್ ಸ್ಕ್ಯಾನ್ ಮತ್ತು ಎಂಆರ್‍ಐ ಸ್ಕ್ಯಾನ್‍ಗಳಿಗೂ ಕ್ಯಾನ್ಸರ್ ಪತ್ತೆಹಚ್ಚುವುದು ಸಾಧ್ಯವಾಗಿಲ್ಲ.

ಕ್ಯಾನ್ಸರ್ ಇತಿಹಾಸದಲ್ಲಿಯೇ ಇಂತಹ ಒಂದು ಬೆಳವಣಿಗೆ ಇದೇ ಮೊದಲ ಬಾರಿ ಆಗಿದೆ ಎಂದು ನ್ಯೂಯಾರ್ಕ್‍ನ ಮೆಮೋರಿಯಲ್ ಸ್ಲೋವನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್‍ನ ಡಾ ಲೂಯಿಸ್ ಎ ಡಯಾಝ್ ಜೆ ಹೇಳಿದ್ದಾರೆ.

ಈ ಕ್ಲಿನಿಕಲ್ ಟ್ರಯಲ್‍ನಲ್ಲಿ ಭಾಗವಹಿಸಿದ್ದ ರೋಗಿಗಳೆಲ್ಲರೂ ಈ ಹಿಂದೆ ಕ್ಯಾನ್ಸರ್‍ಗೆ ಚಿಕಿತ್ಸೆ ಪಡೆಯಲೆಂದು ಕೆಮೋಥೆರಪಿ, ರೇಡಿಯೇಷನ್ ಸಹಿತ ಶಸ್ತ್ರಕ್ರಿಯೆಗೂ ಒಳಗಾಗಿದ್ದರು.

ಇದೀಗ ಎಲ್ಲರೂ ಕ್ಯಾನ್ಸರ್ ಮುಕ್ತರಾಗಿರುವುದರು ಅಚ್ಚರಿ ಮೂಡಿಸಿದೆಯಲ್ಲದೆ ವೈದ್ಯಕೀಯ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದೆ.

ಈ ರೀತಿ ಪ್ರತಿಯೊಂದು ರೋಗಿಯೂ ಕ್ಯಾನ್ಸರ್ ಮುಕ್ತ ಆಗಿರುವುದು ಈ ಹಿಂದೆ ಆಗಿರಲಿಲ್ಲ, ಅಷ್ಟೇ ಅಲ್ಲದೆ ಈ ಪ್ರಾಯೋಗಿಕ ಔಷಧಿಯಿಂದ ಯಾವುದೇ ರೋಗಿ ಕೂಡ ಹೆಚ್ಚು ಅಡ್ಡ ಪರಿಣಾಮ ಎದುರಿಸಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಕ್ಯಾನ್ಸರ್ ಮುಕ್ತರಾಗಿದ್ದೇವೆ ಎಂದು ತಿಳಿಯುತ್ತಲೇ ಎಲ್ಲರೂ ಆನಂದಬಾಷ್ಪ ಸುರಿಸಿದ್ದಾರೆ. ಈ ಟ್ರಯಲ್ ಭಾಗವಾಗಿ ಎಲ್ಲರೂ ಪ್ರತಿ ಮೂರು ವಾರಗಳಿಗೊಮ್ಮೆ ಡೋಸ್ಟರ್‍ಲಿಮಾಬ್ ಔಷಧಿಯನ್ನು ಆರು ತಿಂಗಳ ಅವಧಿಗೆ ತೆಗೆದುಕೊಂಡಿದ್ದರು. ಎಲ್ಲರೂ ಒಂದೇ ಹಂತದ ಕ್ಯಾನ್ಸರ್ ಹೊಂದಿದ್ದರು ಹಾಗೂ ಇತರ ಅಂಗಗಳಿಗೆ ಕ್ಯಾನ್ಸರ್ ಹರಡಿರಲಿಲ್ಲ.

ಈ ಕ್ಲಿನಿಕಲ್ ಟ್ರಯಲ್ ಆಶಾಭಾವನೆ ಮೂಡಿಸಿದೆಯಾದರೂ ದೊಡ್ಡ ಮಟ್ಟದಲ್ಲಿ ಇಂತಹ ಪ್ರಯೋಗ ನಡೆದರೆ ಅದರ ಸಫಲತೆಯನ್ನು ಅಂದಾಜಿಸಬಹುದು ಎಂದು ಕ್ಯಾನ್ಸರ್ ಸಂಶೋಧಕರು ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X