Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಗೋ ರಕ್ಷಕರ ಗೂಂಡಾಗಿರಿ ಬಗ್ಗೆ ಮೋದಿ ಮೌನ...

ಗೋ ರಕ್ಷಕರ ಗೂಂಡಾಗಿರಿ ಬಗ್ಗೆ ಮೋದಿ ಮೌನ ನಾಚಿಕೆಗೇಡು

ನ್ಯೂಯಾರ್ಕ್ ಟೈಮ್ಸ್ ಸಂಪಾದಕೀಯ

ವಾರ್ತಾಭಾರತಿವಾರ್ತಾಭಾರತಿ4 Aug 2016 3:06 PM IST
share
ಗೋ ರಕ್ಷಕರ ಗೂಂಡಾಗಿರಿ ಬಗ್ಗೆ ಮೋದಿ ಮೌನ ನಾಚಿಕೆಗೇಡು

ಭಾರತದ ಗುಜರಾತ್ ರಾಜ್ಯದ ಅತಿ ದೊಡ್ಡ ನಗರ ಅಹ್ಮದಾಬಾದ್‌ನಲ್ಲಿ ರವಿವಾರ ದೇಶದ ಅತ್ಯಂತ ಕೆಳ ವರ್ಗದ ಸದಸ್ಯರಾದ ಸಾವಿರಾರು ದಲಿತರು ನಡೆಸಿದ ಪ್ರತಿಭಟನೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಎಲ್ಲರಿಗೂ ಸಮಾನ ಆರ್ಥಿಕ ಅವಕಾಶಗಳ ಭರವಸೆ ಹಾಗೂ ಬಲಪಂಥೀಯ ಹಿಂದೂ ಸಿದ್ಧಾಂತವಾದಿಗಳ ವಿಭಜನಾತ್ಮಕ ರಾಜಕೀಯದ ನಡುವಿರುವ ವೈರುಧ್ಯತೆಯನ್ನು ಬಹಿರಂಗ ಪಡಿಸಿದೆ.

ತುಳಿತಕ್ಕೊಳಗಾದ ಸಮಾಜ ಬಹಳ ಹಿಂದಿನಿಂದಲೂ ನಡೆಸಿಕೊಂಡು ಬಂದಂತಹ ದನದ ಚರ್ಮವನ್ನು ಸುಲಿಯುವ ಕೆಲಸ ಮಾಡುತ್ತಿದ್ದ ನಾಲ್ಕು ಮಂದಿ ದಲಿತರ ಮೇಲೆ ಗೋ ರಕ್ಷಕರೆನಿಸಿಕೊಂಡವರು ಜುಲೈ 11 ರಂದು ಗುಜರಾತ್ ರಾಜ್ಯದ ಉನಾ ಸಮೀಪ ನಡೆಸಿದ ಹಲ್ಲೆಯನ್ನು ವಿರೋಧಿಸಿ ಈ ಪ್ರತಿಭಟನೆ ಆಯೋಜಿಸಲಾಗಿತ್ತು. ಹಲ್ಲೆಕೋರರು ದಲಿತ ಯುವಕರನ್ನು ಸೊಂಟದ ತನಕ ವಿವಸ್ತ್ರಗೊಳಿಸಿ ಕಾರೊಂದಕ್ಕೆ ಅವರನ್ನು ಕಟ್ಟಿ ಪೊಲೀಸರು ಹಾಗೂ ಇತರರು ನೋಡುತ್ತಿರುವಂತೆಯೇ ಅವರಿಗೆ ಗಂಟೆಗಟ್ಟಲೆ ಹೊಡೆದಿದ್ದರು.

ಹಿಂದೂಗಳಿಗೆ ಪವಿತ್ರವಾಗಿರುವ ಗೋವು ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷದ ಆಡಳಿತದಲ್ಲಿ ಹಿಂದೂ ಬಲಪಂಥೀಯರಿಗೆ ಮಿಂಚಿನ ರಾಡ್ ಆಗಿ ಪರಿಣಮಿಸಿದೆ. ಗೋಹತ್ಯೆ ವಿಚಾರವನ್ನು ಸ್ವತಹ ಪ್ರಧಾನಿ ಮೋದಿಯವರೇ ಕೆಲ ರ್ಯಾಲಿಗಳಲ್ಲಿ ದುರ್ಬಳಕೆ ಮಾಡಿದ್ದಾರೆ. ‘‘ಬಿಜೆಪಿ ಸರಕಾರ ಇದ್ದಾಗಲೆಲ್ಲಾ ಗೋಮಾಂಸದ ಮೇಲೆ ನಿಷೇಧವಿರುವುದು,’’ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೂಡ ಹೇಳಿಕೊಂಡಿದ್ದರು. ‘‘ಆ ಕೆಲ ದಲಿತರಿಗೆ ಒಳ್ಳೆಯ ಪಾಠ ಕಲಿಸುವ ಯಾರಿಗೇ ಆದರೂ ನಾನು ನನ್ನ ಸಂಪೂರ್ಣ ಬೆಂಬಲ ನೀಡುತ್ತೇನೆ,’’ಎಂದು ಬಿಜೆಪಿ ಸಂಸದ ರಾಜಾ ಸಿಂಗ್ ರವಿವಾರ ಘೋಷಿಸಿದ್ದರು. ಇದರ ಪರಿಣಾಮವೇ ನೈತಿಕ ಪೊಲೀಸರ ಅರಾಜಕತೆ ಸೃಷ್ಟಿಯಾಗಿದೆ. ಮಾರ್ಚ್ ತಿಂಗಳಲ್ಲಿ ಇಬ್ಬರು ಗೋ ಮಾರಾಟಗಾರರ ಮೇಲೆ ಜಾರ್ಖಂಡ್ ರಾಜ್ಯದಲ್ಲಿ ಗಂಭೀರ ಹಲ್ಲೆ ನಡೆದಿತ್ತು.

ತಮ್ಮ ಮೇಲೆ ಹಲ್ಲೆ ನಡೆಯುವುದಿಲ್ಲ ಹಾಗೂ ತಲೆತಲಾಂತರದಿಂದ ತಮ್ಮ ಸಮಾಜದ ಮೇಲೆ ನಡೆಯುತ್ತಿರುವ ಶೋಷಣೆಗೆ ಅಂತ್ಯ ಕಾಣಿಸದ ಹೊರತು ದಲಿತರು ಸತ್ತ ದನಗಳ ದೇಹಗಳನ್ನು ವಿಲೇವಾರಿ ಮಾಡಲು ನಿರಾಕರಿಸುತ್ತಿದ್ದು, ಸತ್ತ ದನಗಳ ದೇಹಗಳು ಕೊಳೆತು ನಾರುತ್ತಿವೆ. ದಲಿತರಲ್ಲಿ ಶಿಕ್ಷಣ ಮಟ್ಟ ಹಾಗೂ ನಿರೀಕ್ಷೆಗಳು ಹೆಚ್ಚಾಗಿದ್ದರೂ ಅವರು ಈಗಲೂ ವಿಪರೀತ ತಾರತಮ್ಯ ನೀತಿಯಿಂದ ತೊಂದರೆಗೀಡಾಗಿದ್ದಾರೆ. ಜನವರಿ ತಿಂಗಳಲ್ಲಿ ಜಾತಿ ಆಧರಿತ ಬೆದರಿಕೆಗಳಿಂದ ಒಬ್ಬ ದಲಿತ ಪಿಎಚ್‌ಡಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದ.

ಗುಜರಾತ್ ರಾಜ್ಯವನ್ನು 12 ವರ್ಷಗಳ ಕಾಲ ಆಳಿದ್ದ ಮೋದಿ 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಅಭೂತಪೂರ್ವ ವಿಜಯ ದಾಖಲಿಸಿ ಇಡೀ ಭಾರತವನ್ನು ಗುಜರಾತ್ ಮಾದರಿಯಲ್ಲಿ ಆರ್ಥಿಕ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದಾಗಿ ಭರವಸೆ ನೀಡಿದ್ದರು. ಆದರೆ ಕಳೆದ ಸೆಪ್ಟೆಂಬರ್‌ತಿಂಗಳಿನಲ್ಲಿ ಗುಜರಾತ್ ರಾಜ್ಯದಲ್ಲಿ ಮಧ್ಯಮ ವರ್ಗದ ಪಟೇಲ್ ಸಮುದಾಯ ನಿರುದ್ಯೋಗ ಸಮಸ್ಯೆಯಿಂದ ಆಕ್ರೋಶಗೊಂಡು ಆಯೋಜಿಸಿದ್ದ ಪ್ರತಿಭಟನೆಗಳಿಂದ ಗುಜರಾತ್‌ನಲ್ಲಿ ಉತ್ತಮವಾಗಿ ಜೀವಿಸುತ್ತಿದ್ದಾರೆಂದುಕೊಂಡವರೂ ಒದ್ದಾಡುತ್ತಿದ್ದಾರೆಂದು ತಿಳಿದು ಬಂದಿತ್ತು.

ಸೋಮವಾರ, ಸ್ವತಹ ಮೋದಿಯವರೇ ಗುಜರಾತ್‌ನಲ್ಲಿ ತಮ್ಮ ಉತ್ತರಾಧಿಕಾರಿಯಾಗಿ ಆರಿಸಿದ್ದ ಅಲ್ಲಿನ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ರಾಜೀನಾಮೆ ನೀಡಿದ್ದರು. ಗುಜರಾತ್ ನಲ್ಲಿರುವ ಗೊಂದಲ ಹಾಗೂ ಗದ್ದಲಗಳು ಮುಂದಿನ ವರ್ಷ ರಾಜ್ಯದಲ್ಲಿ ನಡೆಯುವ ಚುನಾವಣೆಗಳಲ್ಲಿ ಹಾಗೂ 2019 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿಗೆ ಮುಳುವಾಗಬಹುದೋ ಎಂಬ ಭಯದ ಸಂಕೇತವೇ ಈ ಬೆಳವಣಿಗೆಯಾಗಿದೆ. ಮೋದಿ ಗೋ ರರಕ್ಷಕರ ಅಟ್ಟಹಾಸದ ಬಗ್ಗೆ ತಮ್ಮ ನಾಚಿಕೆಗೇಡು ಮೌನ ಮುರಿಯದಿದ್ದರೆ ಹಾಗೂ ಆರ್ಥಿಕ ಅವಕಾಶಗಳು, ಆತ್ಮಗೌರವ ಹಾಗೂ ನ್ಯಾಯದೆಡೆಗೆ ತಮ್ಮ ರಾಜಕೀಯ ಗುರಿಯನ್ನು ನೆಡದೇ ಹೋದರೆ ಬಿಜೆಪಿಯ ಈಗಿನ ಭಯ ನಿಜವಾಗಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X