ಉಕ್ರೇನ್ ಸೇನೆ ಸೇರಿದ್ದ ಬ್ರೆಝಿಲ್ ನ ರೂಪದರ್ಶಿ ರಶ್ಯಾದ ವಾಯುದಾಳಿಯಲ್ಲಿ ಮೃತ್ಯು
ಸಾವೊಪಾಲೊ, ಆ.1: ಉಕ್ರೇನ್ ಮೇಲಿನ ರಶ್ಯ ಆಕ್ರಮಣವನ್ನು ವಿರೋಧಿಸಿ, ಉಕ್ರೇನ್ ಸೇನೆಯಲ್ಲಿ ಸ್ವಯಂಸೇವಕರಾಗಿ ಸೇರ್ಪಡೆಗೊಂಡಿದ್ದ ಬ್ರೆಝಿಲ್ ನ ಮಾಜಿ ರೂಪದರ್ಶಿ ಥಲಿತಾ ಡೊ ವ್ಯಾಲ್ಲೆ ರಶ್ಯದ ವಾಯುದಾಳಿಯಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ. 39 ವರ್ಷದ ಥಲಿತಾ ಉಕ್ರೇನ್ನ ಸ್ನಿಪರ್ ತುಕಡಿಯಲ್ಲಿ 3 ವಾರ ಸೇವೆ ಸಲ್ಲಿಸಿದ್ದರು .
ಜೂನ್ 30ರಂದು ಖಾರ್ಕಿವ್ ವಲಯದಲ್ಲಿನ ಗ್ರಾಮವೊಂದರ ಮೇಲೆ ರಶ್ಯ ನಡೆಸಿದ ಬಾಂಬ್ ದಾಳಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಗ್ರಾಮಸ್ಥರನ್ನು ಅಲ್ಲಿಂದ ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಥಲಿತಾ ಮತ್ತವರ ತಂಡ ತೊಡಗಿದ್ದಾಗ, ಇವರು ರಶ್ಯದ ಕ್ಷಿಪಣಿ ದಾಳಿಯಿಂದ ಮೃತಪಟ್ಟಿದ್ದಾರೆ. ಇದೇ ದಾಳಿಯಲ್ಲಿ ಬ್ರೆಝಿಲ್ ನ ಮಾಜಿ ಯೋಧ ಡಗ್ಲಾಸ್ ಬುರಿಗೋ ಕೂಡಾ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Next Story