ರಶ್ಯ: ಇರಾನ್ ಉಪಗ್ರಹ ಉಡಾವಣೆ ಯಶಸ್ವಿ; ಉಕ್ರೇನ್ ಮೇಲೆ ನಿಗಾದ ಉದ್ದೇಶ ?

-

ಸಾಂದರ್ಭಿಕ ಚಿತ್ರ:PTI

ಮಾಸ್ಕೋ, ಆ.9: ಮಂಗಳವಾರ ರಶ್ಯವು ಕಝಕ್ಸ್ತಾನದಿಂದ ಇರಾನ್ನ ಉಪಗ್ರಹವನ್ನು ಅಂತರಿಕ್ಷಕ್ಕೆ ಉಡಾಯಿಸಿದ್ದು ಉಪಗ್ರಹ ಯಶಸ್ವಿಯಾಗಿ ಕಕ್ಷೆ ಪ್ರವೇಶಿಸಿದೆ ಎಂದು ವರದಿಯಾಗಿದೆ. ಉಕ್ರೇನ್ನ ಮಿಲಿಟರಿ ನೆರೆಗಳ ಮೇಲೆ ನಿಗಾ ವಹಿಸಲು ಈ ಉಪಗ್ರಹವನ್ನು ಬಳಸುವ ಸಾಧ್ಯತೆಯಿದೆ ಎಂದು ರಕ್ಷಣಾ ತಜ್ಞರು ಹೇಳಿದ್ದಾರೆ. ಉಕ್ರೇನ್ ಮೇಲಿನ ಆಕ್ರಮಣದ ಬಳಿಕ ಪಾಶ್ಚಿಮಾತ್ಯ ದೇಶಗಳ ನಿರ್ಬಂಧದ ಬಳಿಕ ಅಂತರಾಷ್ಟ್ರೀಯ ವೇದಿಕೆಯಲ್ಲಿ ಒಬ್ಬಂಟಿಯಾಗುವ ಪ್ರಮೇಯವನ್ನು ನಿವಾರಿಸಿಕೊಳ್ಳಲು ರಶ್ಯ ಮಧ್ಯಪ್ರಾಚ್ಯ, ಏಶ್ಯಾ ಮತ್ತು ಆಫ್ರಿಕಾ ದೇಶಗಳತ್ತ ಗಮನ ಕೇಂದ್ರೀಕರಿಸಿದ್ದು ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಹೊಸ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ.

ಕಝಕ್ಸ್ತಾನದಲ್ಲಿ ರಶ್ಯ ನಿಯಂತ್ರಣದಲ್ಲಿರುವ ಬೈಕೊನುರ್ ಬಾಹ್ಯಾಕಾಶ ಕೇಂದ್ರದಲ್ಲಿ ಉಡಾವಣೆ ಕಾರ್ಯ ಯಶಸ್ವಿಯಾದ ಬಳಿಕ ಪ್ರತಿಕ್ರಿಯಿಸಿದ ರಶ್ಯ ಬಾಹ್ಯಾಕಾಶ ಯೋಜನೆ ಮುಖ್ಯಸ್ಥ ಯೂರಿ ಬೊರಿಸೋವ್ ‘ ಇದು ರಶ್ಯ-ಇರಾನ್ ದ್ವಿಪಕ್ಷೀಯ ಸಹಕಾರ ಕ್ಷೇತ್ರದಲ್ಲಿನ ಪ್ರಮುಖ ಮೈಲುಗಲ್ಲಾಗಿದ್ದು ನೂತನ ಮತ್ತು ವಿಸ್ತತ ಯೋಜನೆಗಳ ಅನುಷ್ಟಾನಕ್ಕೆ ಮಾರ್ಗವನ್ನು ತೆರೆದಿದೆ’ ಎಂದು ಹೇಳಿದರು.

 ಇದೊಂದು ಐತಿಹಾಸಿಕ ಉಪಕ್ರಮವಾಗಿದ್ದು ಎರಡು ದೇಶಗಳ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಸಂವಾದಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಇರಾನ್ನ ದೂರ ಸಂಪರ್ಕ ಸಚಿವ ಇಸ್ಸಾ ಝರೆಪೌರ್ ಹೇಳಿದ್ದಾರೆ. ಉಪಗ್ರಹದ ನಿಯಂತ್ರಣವನ್ನು ಇರಾನ್ಗೆ ವಹಿಸಿಕೊಡುವ ಮೊದಲು, ಹಲವು ತಿಂಗಳ ಕಾಲ ಇದನ್ನು ಉಕ್ರೇನ್ ಸೇನಾ ನೆಲೆಯ ಮೇಲೆ ನಿಗಾ ಇರಿಸಲು ಬಳಸಲು ರಶ್ಯ ಉದ್ದೇಶಿಸಿದೆ ಎಂದು ಪಾಶ್ಚಿಮಾತ್ಯ ದೇಶಗಳ ಗುಪ್ತಚರ ಇಲಾಖೆಯ ಮಾಹಿತಿಯನ್ನು ಉಲ್ಲೇಖಿಸಿ ಕಳೆದ ವಾರ ‘ದಿ ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿತ್ತು.

ಆದರೆ ಇದನ್ನು ನಿರಾಕರಿಸಿರುವ ಇರಾನ್ ಬಾಹ್ಯಾಕಾಶ ಸಂಸ್ಥೆ ಐಎಸ್ಎ, ಉಪಗ್ರಹದ ಮೊದಲ ಸಿಗ್ನಲ್ ಅನ್ನು ತನ್ನ ನಿಯಂತ್ರಣ ಕೇಂದ್ರ ಈಗಾಗಲೇ ಪಡೆದಿದೆ. ಯಾವುದೇ ಮೂರನೇ ದೇಶಕ್ಕೆ ಇದನ್ನು ಪಡೆಯಲು ಅವಕಾಶವಿಲ್ಲ ಎಂದು ಪ್ರತಿಕ್ರಿಯಿಸಿದೆ. 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top