ಭಾರತಕ್ಕೆ ಸ್ವಾತಂತ್ರೋತ್ಸವ ಶುಭಾಶಯ ಸಲ್ಲಿಸಿದ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ
(Photo | ISRO @ Twitter)
ವಾಷಿಂಗ್ಟನ್, ಆ.15: ಭಾರತದ 75ನೇ ಸ್ವಾತಂತ್ರೋತ್ಸವದ ಸಂದರ್ಭ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಅತ್ಯಂತ ವಿಶೇಷವಾದ ಶುಭಾಶಯ ಸಂದೇಶ ದೊರಕಿದೆ ಎಂದು ಅಮೆರಿಕದಲ್ಲಿನ ಭಾರತೀಯ ರಾಯಭಾರಿ ತರಣ್ಜಿತ್ ಸಿಂಗ್ ಸಂಧು ಹೇಳಿದ್ದಾರೆ.
ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿರುವ ಗಗನಯಾತ್ರಿ ಸಮಂತಾ ಕ್ರಿಸ್ಟೋಫೊರೆಟಿ ಸ್ವಾತಂತ್ರೋತ್ಸವದ ಶುಭಾಶಯ ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಂಧು ‘ ಆಗಸವು ಮಿತಿಯಲ್ಲ. 75ನೇ ಸ್ವಾತಂತ್ರ್ಯ ಸಂಭ್ರಮದಲ್ಲಿರುವ ಭಾರತಕ್ಕೆ ಗಗನಯಾತ್ರಿ ಸಮಂತಾ ಶುಭ ಹಾರೈಸಿದ್ದಾರೆ. ಅವರ ಸಂದೇಶಕ್ಕೆ ಅಭಿನಂದನೆಗಳು. ನಾಸಾ, ಇಸ್ರೋ ಮತ್ತು ಇಎಸ್ಎ ನಡುವಿನ ನೈಜ ಸಹಭಾಗಿತ್ವಕ್ಕೆ ಇದು ಸಂಕೇತವಾಗಿದೆ’ ಎಂದಿದ್ದಾರೆ. ಈ ವೀಡಿಯೊವನ್ನು ಶೇರ್ ಮಾಡಿರುವ ಇಸ್ರೋ, ಸ್ವಾತಂತ್ರೋತ್ಸವದ ಅಮೃತ ಮಹೋತ್ಸವಕ್ಕೆ ಶುಭ ಹಾರೈಸಿದವರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದೆ.
Wishes believe in no boundaries: On the occasion of #AzadiKaAmritMahotsav, from high above the sky, an Italian astronaut wishes India Happy Independence Day.
— Pralhad Joshi (@JoshiPralhad) August 14, 2022
The entire nation is grateful for the wishes!
Hail #ISRO@NASA@esa@Space_Station pic.twitter.com/iPP9N2DBKM