Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ವಿಶ್ವಸಂಸ್ಥೆ: ಪರಮಾಣು ನಿಶ್ಯಸ್ತ್ರೀಕರಣ...

ವಿಶ್ವಸಂಸ್ಥೆ: ಪರಮಾಣು ನಿಶ್ಯಸ್ತ್ರೀಕರಣ ಘೋಷಣೆ ಅಂಗೀಕಾರಕ್ಕೆ ರಶ್ಯ ತಡೆ

ವಾರ್ತಾಭಾರತಿವಾರ್ತಾಭಾರತಿ27 Aug 2022 9:44 PM IST
share
ವಿಶ್ವಸಂಸ್ಥೆ: ಪರಮಾಣು ನಿಶ್ಯಸ್ತ್ರೀಕರಣ ಘೋಷಣೆ ಅಂಗೀಕಾರಕ್ಕೆ ರಶ್ಯ ತಡೆ

ವಿಶ್ವಸಂಸ್ಥೆ, ಆ.೨೭: ಅಣ್ವಸ್ತ್ರ ನಿಶ್ಯಸ್ತ್ರೀಕರಣ ಒಪ್ಪಂದದ ಕುರಿತು ೪ ವಾರಗಳ ಸಮಾಲೋಚನೆಯ  ಬಳಿಕ ವಿಶ್ವಸಂಸ್ಥೆಯು  ಪರಮಾಣು ನಿಶ್ಯಸ್ತ್ರೀಕರಣದ ಜಂಟಿ  ಘೋಷಣೆಯನ್ನು ಅಂಗೀಕರಿಸುವ ಪ್ರಕ್ರಿಯೆಗೆ ರಶ್ಯ ತಡೆಯೊಡ್ಡಿದೆ. ಘೋಷಣೆಯಲ್ಲಿ ಕೆಲವೊಂದು ರಾಜಕೀಯ ಅಂಶಗಳಿವೆ ಎಂದು ರಶ್ಯ ಪ್ರತಿಪಾದಿಸಿದೆ.

‌

ಪರಮಾಣು  ಹರಡುವಿಕೆಯನ್ನು ತಡೆಯಲು, ಸಂಪೂರ್ಣ ನಿಶ್ಯಸ್ತ್ರೀಕರಣವನ್ನು ಉತ್ತೇಜಿಸಲು ಮತ್ತು ಪರಮಾಣು ಶಕ್ತಿಯ ಶಾಂತಿಯುತ ಬಳಕೆಯಲ್ಲಿ ಸಹಕಾರವನ್ನು ಉತ್ತೇಜಿಸುವ ಗುರಿ ಹೊಂದಿರುವ ಪರಮಾಣು ಪ್ರಸರಣ ನಿರೋಧ ಒಪ್ಪಂದಕ್ಕೆ ಸಹಿಹಾಕಿರುವ 191 ದೇಶಗಳು  ಪ್ರತೀ 5 ವರ್ಷಕ್ಕೊಮ್ಮೆ ಒಪ್ಪಂದದ ಅಂಶವನ್ನು ಪರಿಶೀಲನೆ ನಡೆಸುತ್ತವೆ. ಈ ನಿಟ್ಟಿನಲ್ಲಿ ನ್ಯೂಯಾರ್ಕ್ ನ ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಆಗಸ್ಟ್ 1 ರಿಂದ ಸಭೆ ಸೇರಿರುವ191ದೇಶಗಳ ಪ್ರತಿನಿಧಿಗಳು ಶುಕ್ರವಾರದ ಅಂತಿಮ ಅಧಿವೇಶನದಲ್ಲಿ ಘೋಷಣೆ ಅಂಗೀಕರಿಸುವ ನಿರೀಕ್ಷೆಯಿತ್ತು.

ಆದರೆ ಘೋಷಣೆಯ ಅಂತಿಮ ಕರಡು ಪಠ್ಯದ ಬಗ್ಗೆ ರಶ್ಯದ ಪ್ರತಿನಿಧಿ ಇಗೋರ್ ವಿಶ್ನೆವೆಟ್ಸ್ಕಿ ಆಕ್ಷೇಪಿಸಿದರು. 30 ಕ್ಕೂ ಹೆಚ್ಚು ಪುಟಗಳ ಈ ಘೋಷಣೆ ಸಮತೋಲನ ಹೊಂದಿಲ್ಲ. ಸ್ಪಷ್ಟವಾದ ರಾಜಕೀಯ ಸ್ವರೂಪದ ಕೆಲವು ಪ್ಯಾರಾಗಳ ಕುರಿತು ನಮ್ಮ ನಿಯೋಗವು ಒಂದು ಪ್ರಮುಖ ಆಕ್ಷೇಪವನ್ನು ಹೊಂದಿದೆ . ರಶ್ಯ ಮಾತ್ರವಲ್ಲ, ಇತರ ಹಲವು ದೇಶಗಳೂ ಘೋಷಣೆಯನ್ನು ವಿರೋಧಿಸಿವೆ ಎಂದವರು ಹೇಳಿದರು.

ಮೂಲಗಳ ಪ್ರಕಾರ, ಉಕ್ರೇನ್ನ ಝಪೊರಿಝಿಯಾ ಪರಮಾಣು ಸ್ಥಾವರಕ್ಕೆ ಸಂಬಂಧಿಸಿದ(ಈಗ ರಶ್ಯದ ಸೇನೆಯ ವಶದಲ್ಲಿದೆ) ವಾಕ್ಯಗಳ ಕುರಿತು ರಶ್ಯ ಆಕ್ಷೇಪ ಎತ್ತಿದೆ. ಝಪೊರಿಝಿಯಾ ಸೇರಿದಂತೆ ಉಕ್ರೇನ್ನ ಇಂಧನ ಸ್ಥಾವರಗಳ ಸುತ್ತಮುತ್ತ ನಡೆಯುತ್ತಿರುವ ಸೇನಾ ಚಟುವಟಿಕೆ ಅತ್ಯಂತ ಕಳವಳಕಾರಿಯಾಗಿದೆ ಮತ್ತು ಈ ಸ್ಥಳಗಳ ಮೇಲಿನ ನಿಯಂತ್ರಣವನ್ನು ಉಕ್ರೇನ್ ಕಳೆದುಕೊಂಡಿರುವುದು ಸುರಕ್ಷತೆ ವಿಷಯದಲ್ಲಿ ನಕಾರಾತ್ಮಕ  ಪರಿಣಾಮ ಬೀರಲಿದೆ ಎಂದು ಈ ವಾಕ್ಯದಲ್ಲಿ ಉಲ್ಲೇಖಿಸಲಾಗಿದೆ.

ʼಅಂತಿಮವಾಗಿ, ಸಮಾವೇಶವು ಒಪ್ಪಂದವನ್ನು ಸಾಧಿಸುವ ಸ್ಥಿತಿಯಲ್ಲಿ ಇಲ್ಲ' ಎಂದು ಸಮಾವೇಶದ  ಅಧ್ಯಕ್ಷತೆ ವಹಿಸಿದ್ದ ಅರ್ಜೆಂಟೀನಾದ ಗುಸ್ತಾವೊ ಝವಿನೆನ್ ಹೇಳಿದರು. ೨೦೧೫ರ ಪರಿಶೀಲನಾ ಸಮಾವೇಶದಲ್ಲಿಯೂ ಕೆಲವು ವಸ್ತುನಿಷ್ಟ ವಿಷಯಗಳ ಬಗ್ಗೆ ಒಪ್ಪಂದಕ್ಕೆ ಬರಲಾಗಿಲ್ಲ. ಇದರ ಹೊರತಾಗಿ, ಇರಾನ್ನ ಪರಮಾಣು ಕಾರ್ಯಕ್ರಮ, ಉತ್ತರ ಕೊರಿಯಾದ ಪರಮಾಣು ಪರೀಕ್ಷೆ ಸೇರಿದಂತೆ ಹಲವು ಜ್ವಲಂತ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ಈ ವರ್ಷದ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ʼಜಗತ್ತು ಶೀತಲ ಯುದ್ಧದ ಉತ್ತುಂಗದ ಬಳಿಕ ದೂರವಾಗಿದ್ದ ಪರಮಾಣು ಅಪಾಯದ ಅಂಚಿನಲ್ಲಿದೆ. ಮನುಕುಲವು ಕೇವಲ ಒಂದು ತಪ್ಪು ತಿಳುವಳಿಕೆ, ತಪ್ಪು ಲೆಕ್ಕಾಚಾರ ಪರಮಾಣು ವಿನಾಶಕ್ಕೆ ಕಾರಣವಾಗುವ ಸ್ಥಿತಿಯಲ್ಲಿದೆ' ಎಂದು ಎಚ್ಚರಿಸಿದರು. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X