ಚೀನಾ ಕರಾವಳಿಯ ಬಳಿ ಡ್ರೋನ್ ಹೊಡೆದುರುಳಿಸಿದ ತೈವಾನ್
ತೈಪೆ, ಸೆ.೧: ಇಂದು ಬೆಳಿಗ್ಗೆ ಚೀನಾದ ಕರಾವಳಿಯ ಬಳಿ ಶಿಯು ದ್ವೀಪದ ನಿರ್ಬಂಧಿತ ಜಲವ್ಯಾಪ್ತಿಯಲ್ಲಿ ತನ್ನ ವಾಯುಪ್ರದೇಶವನ್ನು ಪ್ರವೇಶಿಸಿದ ಅಪರಿಚಿತ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ ಎಂದು ತೈವಾನ್ ರಕ್ಷಣಾ ಇಲಾಖೆ ಗುರುವಾರ ಹೇಳಿದೆ.
ರಕ್ಷಣಾ ಪ್ರದೇಶದ ಭದ್ರತೆಯನ್ನು ಕಾಪಾಡಿಕೊಳ್ಳಲು ರಕ್ಷಣಾ ಇಲಾಖೆ ಹುಡುಕಾಟ, ಮೇಲ್ವಿಚಾರಣೆ ಹಾಗೂ ನಿಕಟ ನಿಗಾ ಕಾರ್ಯಾಚರಣೆ ಮುಂದುವರಿಸಲಿದೆ. ಶನಿವಾರ ಮತ್ತು ಸೋಮವಾರ ಕಿನ್ಮೆನ್ ದ್ವೀಪದ ಬಳಿ ಚೀನಾದ ೨ ಡ್ರೋನ್ಗಳನ್ನು ಪತ್ತೆಹಚ್ಚಲಾಗಿದೆ ಎಂದು ತೈವಾನ್ ರಕ್ಷಣಾ ಇಲಾಖೆಯ ಹೇಳಿಕೆ ತಿಳಿಸಿದೆ.
Next Story