ಅಫ್ಘಾನ್ನಲ್ಲಿ ಭೂಕಂಪ 6 ಮಂದಿ ಮೃತ್ಯು
ಕಾಬೂಲ್, ಸೆ.5: ಅಫ್ಘಾನ್ನ ಪೂರ್ವ ಭಾಗದಲ್ಲಿ ರವಿವಾರ ರಾತ್ರಿ ಸಂಭವಿಸಿದ 5.3 ತೀವ್ರತೆಯ ಭೂಕಂಪದಲ್ಲಿ ಕನಿಷ್ಟ 6 ಮಂದಿ ಮೃತಪಟ್ಟಿದ್ದು ಇತರ ೯ ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಪೂರ್ವದಲ್ಲಿ ಪಾಕಿಸ್ತಾನದೊಂದಿಗಿನ ಗಡಿಪ್ರದೇಶದ ಬಳಿಯಿರುವ ಜಿಲ್ಲೆಗಳಲ್ಲಿ ಭೂಮಿ ಕಂಪಿಸಿದೆ. 3 ತಿಂಗಳ ಹಿಂದೆ ಇದೇ ಪ್ರದೇಶದಲ್ಲಿ ಸಂಭವಿಸಿದ್ದ ಭಾರೀ ಭೂಕಂಪದಲ್ಲಿ 1000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ರವಿವಾರ ನಡೆದ ಭೂಕಂಪದ ಕಾರಣ ಕುನಾರ್, ಲಘ್ಮಾನ್ ಮತ್ತು ನಂಗರ್ಹಾರ್ ಮತ್ತು ಕಾಬೂಲ್ ಪ್ರಾಂತದಲ್ಲೂ ಭೂಮಿ ಕಂಪಿಸಿದ್ದು ಜನತೆ ಆತಂಕಗೊAಡರು ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story