ಬ್ರಿಟನ್ ಪ್ರಧಾನಿ ಲಿಝ್ ಟ್ರೂಸ್ ರಾಜೀನಾಮೆ
ಲಿಝ್ ಟ್ರೂಸ್ (PTI)
ಲಂಡನ್, ಸೆ.2: ಇತ್ತೀಚೆಗೆ ರಿಷಿ ಸುನಾಕ್(Rishi Sunak) ಅವರನ್ನು ಸೋಲಿಸಿ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದ ಲಿಝ್ ಟ್ರೂಸ್ ಇಂದು ರಾಜೀನಾಮೆ ನೀಡಿದ್ದಾರೆ.
ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದ್ದಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಆರು ವಾರಗಳ ಹಿಂದಷ್ಟೇ ಪ್ರಧಾನಿ ಹುದ್ದೆಗೇರಿದ್ದ ಲಿಝ್ ಟ್ರೂಸ್ ಹೇಳಿದ್ದಾರೆ.
ಕನ್ಸರ್ವೇಟಿವ್ ಪಕ್ಷದ ಲಿಝ್ ಅವರು ಬ್ರಿಟನ್ನಲ್ಲಿ ಉಂಟಾಗಿರುವ ಆರ್ಥಿಕ ಕುಸಿತವನ್ನು ನಿಭಾಯಿಸಲು ಸಾಧ್ಯವಾಗದ್ದಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
Next Story