ಬಾಗ್ದಾದ್ನಲ್ಲಿ ಸ್ಫೋಟ: ಕನಿಷ್ಠ 10 ಮಂದಿ ಮೃತ್ಯು
ಬಾಗ್ದಾದ್: ಪೂರ್ವ ಬಾಗ್ದಾದ್ನಲ್ಲಿ ಶನಿವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಫುಟ್ಬಾಲ್ ಸ್ಟೇಡಿಯಂ ಮತ್ತು ಕೆಫೆ ಸಮೀಪದ ಗ್ಯಾರೇಜ್ ಒಂದರಲ್ಲಿ ವಾಹನಕ್ಕೆ ಅಳವಡಿಸಿದ ಸ್ಫೋಟಕ ಸಿಡಿದು ಈ ದುರಂತ ಸಂಭವಿಸಿದೆ. ಇದು ಪಕ್ಕದಲ್ಲೇ ಇದ್ದ ಗ್ಯಾಸ್ ಟ್ಯಾಂಕರ್ ಸ್ಫೋಟಕ್ಕೆ ಕಾರಣವಾಯಿತು ಎಂದು ಭದ್ರತಾ ಮೂಲಗಳು ಹೇಳಿವೆ.
ಘಟನೆಯಲ್ಲಿ ಮೃತಪಟ್ಟ ಬಹುತೇಕ ಮಂದಿ ಸ್ಟೇಡಿಯಂನಲ್ಲಿ ಆಡುತ್ತಿದ್ದ ಹವ್ಯಾಸಿ ಫುಟ್ಬಾಲ್ ಆಟಗಾರರು ಎಂದು ತಿಳಿದುಬಂದಿದೆ.
ಪೂರ್ವ ಬಾಗ್ದಾದ್ನ ಗ್ಯಾರೇಜ್ ಒಂದರಲ್ಲಿ ಅನಿಲ ಟ್ಯಾಂಕರ್ ಸ್ಫೋಟಗೊಂಡು ಹಲವು ಮಂದಿ ಮೃತಪಟ್ಟಿದ್ದಾರೆ. ಸ್ಫೋಟಕ್ಕೆ ಕಾರಣವೇನು ಎಂಬ ಬಗ್ಗೆ ಭದ್ರತಾ ಪಡೆಗಳು ತನಿಖೆ ನಡೆಸುತ್ತಿವೆ ಎಂದು ಸೇನಾ ಪ್ರಕಟಣೆ ತಿಳಿಸಿದೆ. ಈ ಬಗ್ಗೆ hindustantimes.com ವರದಿ ಮಾಡಿದೆ.
Next Story