Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ...

ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷಿಸಿದ ಉತ್ತರ ಕೊರಿಯಾ: ವರದಿ

18 Nov 2022 11:07 PM IST
share
ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷಿಸಿದ ಉತ್ತರ ಕೊರಿಯಾ: ವರದಿ

ಸಿಯೋಲ್, ನ.18: ಅಮೆರಿಕ ಸೇರಿದಂತೆ ಅಂತರಾಷ್ಟ್ರೀಯ ಸಮುದಾಯದ ಎಚ್ಚರಿಕೆಗೆ ಕಿವಿಗೊಡದ ಉತ್ತರ ಕೊರಿಯಾ ಶುಕ್ರವಾರ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹಾರಿಸಿದ್ದು ಇದು ಕಳೆದ 2 ದಿನದಲ್ಲಿ 2ನೇ ಖಂಡಾಂತರ ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆಯಾಗಿದೆ ಎಂದು ವರದಿಯಾಗಿದೆ. 

ಉತ್ತರ ಕೊರಿಯಾ ಪರಮಾಣು ಪರೀಕ್ಷೆಗೆ ಎಲ್ಲಾ ಸಿದ್ಧತೆ ನಡೆಸಿಕೊಂಡಿದೆ ಎಂಬ ಅನುಮಾನದ ನಡುವೆಯೇ ಕಳೆದ 2 ತಿಂಗಳಿಂದ ಆ ದೇಶ ನಿರಂತರ ಕ್ಷಿಪಣಿ ಪರೀಕ್ಷೆ ನಡೆಸುತ್ತಿರುವುದು ಕಳವಳಕ್ಕೆ ಕಾರಣವಾಗಿದೆ ಎಂದು ದಕ್ಷಿಣ ಕೊರಿಯಾ ಪ್ರತಿಕ್ರಿಯಿಸಿದೆ.
ಉತ್ತರ ಕೊರಿಯಾ ಶಂಕಿತ ಬ್ಯಾಲಿಸ್ಟಿಕ್ ಕ್ಷಿಪಣಿ ಹಾರಿಸಿದೆ ಎಂದು ಜಪಾನ್ನ ರಕ್ಷಣಾ ಇಲಾಖೆಯೂ ದೃಢಪಡಿಸಿದೆ. ಜಪಾನ್ನ ಕಡಲ ಪ್ರದೇಶಕ್ಕೆ ಕ್ಷಿಪಣಿ ಅಪ್ಪಳಿಸಿದ್ದು ಕ್ಷಿಪಣಿಯ ಅವಶೇಷದ ಸನಿಹ ತೆರಳದಂತೆ ಜಪಾನ್ ಕರಾವಳಿ ಕಾವಲು ಪಡೆ ದೋಣಿಗಳಿಗೆ ಎಚ್ಚರಿಕೆ ನೀಡಿದೆ. 

ಅಮೆರಿಕವು ಪ್ರಾದೇಶಿಕ ಮಿತ್ರರಾಷ್ಟ್ರಗಳಿಗೆ ನೆರವಿನ ಬದ್ಧತೆ ಮುಂದುವರಿಸಿದರೆ ತಮ್ಮ ದೇಶ ಉಗ್ರ ಮಿಲಿಟರಿ ಕ್ರಮವನ್ನು ತೆಗೆದುಕೊಳ್ಳಲಿದೆ ಎಂದು ಉತ್ತರ ಕೊರಿಯಾದ ವಿದೇಶಾಂಗ ಸಚಿವ ಚೋಯಿ ಸೊನ್ಹುಯಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಗುರುವಾರ ಬ್ಯಾಂಕಾಕ್ನಲ್ಲಿ ಅಪೆಕ್ ಶೃಂಗಸಭೆಯ ನೇಪಥ್ಯದಲ್ಲಿ  ಚೀನಾ ಮತ್ತು ಜಪಾನ್ ಮುಖಂಡರ ಮಧ್ಯೆ ನಡೆದಿದ್ದ ಸಭೆಯಲ್ಲಿ ಉತ್ತರ ಕೊರಿಯಾದ ವಿಷಯವೂ ಅಜೆಂಡಾದಲ್ಲಿತ್ತು. ಇದು ಉತ್ತರಕೊರಿಯಾದ ಅಧ್ಯಕ್ಷ ಕಿಮ್ ಜೋಂಗ್ ಉನ್ಗೆ ಅಸಮಾಧಾನ ತಂದಿದೆ. ಇದೀಗ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ ಮೂಲಕ ಅವರು ಜಪಾನ್ ಹಾಗೂ ಅಮೆರಿಕಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ  ಎಂದು ವಿಶ್ಲೇಷಿಸಲಾಗಿದೆ. ಇತ್ತೀಚೆಗೆ ಉತ್ತರ ಕೊರಿಯಾ ಪರೀಕ್ಷಿಸಿದ ಅಲ್ಪಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ದಕ್ಷಿಣ ಕೊರಿಯಾದ ಜತೆಗಿನ ಸಮುದ್ರಗಡಿ ಪ್ರದೇಶವನ್ನು ಉಲ್ಲಂಘಿಸಿದೆ. ಇದು ಪ್ರಾದೇಶಿಕ ಆಕ್ರಮಣಕ್ಕೆ ಸಮವಾಗಿದೆ ಎಂದು  ದಕ್ಷಿಣ ಕೊರಿಯಾ ಹೇಳಿತ್ತು.

ವಿಶ್ವಸಂಸ್ಥೆಯು ಉಕ್ರೇನ್ ಯುದ್ಧದ ಕಗ್ಗಂಟಿಗೆ ಪರಿಹಾರ ರೂಪಿಸುವುದರಲ್ಲಿ ನಿರತವಾಗಿರುವ ಅವಕಾಶವನ್ನು ಬಳಸಿಕೊಂಡು ಉತ್ತರ ಕೊರಿಯಾ ನಿಷೇಧಿತ ಕ್ಷಿಪಣಿ ಪರೀಕ್ಷಿಸುತ್ತಿದೆ. ಉತ್ತರ ಕೊರಿಯಾದ ಮೇಲೆ ಇನ್ನಷ್ಟು ನಿರ್ಬಂಧ ವಿಧಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯ ಮಂಡಿಸಿದಾಗ ಉತ್ತರ ಕೊರಿಯಾದ ಮಿತ್ರದೇಶಗಳಾದ ರಶ್ಯ ಮತ್ತು ಚೀನಾ ವೀಟೊ ಪ್ರಯೋಗಿಸಿ ನಿರ್ಣಯಕ್ಕೆ ತಡೆಯೊಡ್ಡಿದೆ. 

ಅಸ್ಥಿರಗೊಳಿಸುವ ಕೃತ್ಯಗಳನ್ನು ನಿಲ್ಲಿಸಿ: ಉ.ಕೊರಿಯಾಕ್ಕೆ ಜಾಗತಿಕ ಮುಖಂಡರ ಸಂದೇಶ‌ 

ಉತ್ತರ ಕೊರಿಯಾ ಶುಕ್ರವಾರ ನಡೆಸಿದ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆಯ ಬಗ್ಗೆ ಅಮೆರಿಕ, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್ ಮತ್ತು ಕೆನಡಾದ ಮುಖಂಡರು ತುರ್ತು ಸಭೆ ನಡೆಸಿದ್ದು ಉತ್ತರ ಕೊರಿಯಾದ ಮೇಲೆ ಒತ್ತಡ ಹೆಚ್ಚಿಸಲು  ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಬ್ಯಾಂಕಾಕ್ನಲ್ಲಿ ನಡೆಯುತ್ತಿರುವ ಏಶಿಯಾ-ಪೆಸಿಫಿಕ್ ಶೃಂಗಸಭೆಯ ನೇಪಥ್ಯದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಉತ್ತರ ಕೊರಿಯಾದ ಕೃತ್ಯ ಖಂಡನೀಯ. ಆ ದೇಶವು ಅಕ್ರಮ, ಅಸ್ಥಿರಗೊಳಿಸುವ ಕೃತ್ಯಗಳನ್ನು ತಕ್ಷಣ ನಿಲ್ಲಿಸಬೇಕು. ಇಂಡೊ-ಪೆಸಿಫಿಕ್ ಒಕ್ಕೂಟದ ನಮ್ಮ ಮಿತ್ರರಿಗೆ ನೆರವು ಮುಂದುವರಿಸಲು ಅಮೆರಿಕ ಬದ್ಧವಾಗಿದೆ. ಈ ಶೃಂಗಸಭೆಯಲ್ಲಿ ಭಾಗವಹಿಸಿರುವ ಎಲ್ಲಾ ದೇಶಗಳೂ ರಾಜತಾಂತ್ರಿಕ ಮಾರ್ಗದಲ್ಲಿ ಮುಂದುವರಿಯುವಂತೆ ಉತ್ತರ ಕೊರಿಯಾದ ಮೇಲೆ ಒತ್ತಡ ಮುಂದುವರಿಸಲಿವೆ ಎಂದರು.
ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಕೆನಡಾ, ನ್ಯೂಝಿಲ್ಯಾಂಡ್ ದೇಶಗಳ ಮುಖಂಡರೂ ಪ್ರಾದೇಶಿಕ ಅಸ್ಥಿರತೆಯ ಕೃತ್ಯಕ್ಕೆ ಮುಂದಾಗದಂತೆ ಉತ್ತರ ಕೊರಿಯಾವನ್ನು ಆಗ್ರಹಿಸಿದ್ದಾರೆ. 

ಅಮೆರಿಕ ತಲುಪುವ ಸಾಮರ್ಥ್ಯದ ಕ್ಷಿಪಣಿ: ಜಪಾನ್ 

ಉತ್ತರ ಕೊರಿಯಾ ಪರೀಕ್ಷಿಸಿದ ಖಂಡಾಂತರ ಕ್ಷಿಪಣಿಯು 15,000 ಕಿ.ಮೀ ದೂರದವರೆಗೆ ಹಾರುವ ಮತ್ತು  ಅಮೆರಿಕವನ್ನು ತಲುಪುವಷ್ಟು ಸಾಮರ್ಥ್ಯವನ್ನು ಹೊಂದಿದೆ ಎಂದು ಜಪಾನ್ನ ರಕ್ಷಣಾ ಸಚಿವ ಯಸುಕಝು ಹಮಡ ಹೇಳಿದ್ದಾರೆ.

ಈ ಕ್ಷಿಪಣಿಯು ಜಪಾನ್ನ ವಿಶೇಷ ಆರ್ಥಿಕ ವಲಯದ ಸಮುದ್ರವ್ಯಾಪ್ತಿಗೆ ಅಪ್ಪಳಿಸಿರುವ ಮಾಹಿತಿಯಿದೆ. ಆದರೆ ಯಾವುದೇ ನಾಶ ನಷ್ಟದ ವರದಿಯಾಗಿಲ್ಲ. ಹೊಕಾಯ್ಡೊ ದ್ವೀಪದ ಪಶ್ಚಿಮದಲ್ಲಿ ಸಮುದ್ರಕ್ಕೆ ಅಪ್ಪಳಿಸಿರುವ ಮಾಹಿತಿಯಿದೆ. ಈ ಬಗ್ಗೆ ಉತ್ತರ ಕೊರಿಯಾಕ್ಕೆ ಬಲವಾದ ಆಕ್ಷೇಪಣೆ ಸಲ್ಲಿಸಲಾಗಿದೆ  ಎಂದು ಜಪಾನ್ ಪ್ರಧಾನಿ ಫುಮಿಯೊ ಕಿಷಿಡಾ ಪ್ರತಿಕ್ರಿಯಿಸಿದ್ದಾರೆ.

ಉ.ಕೊರಿಯಾವನ್ನು ಕೆಣಕುತ್ತಿರುವ ಅಮೆರಿಕ: ರಶ್ಯ ಆರೋಪ

ಅಮೆರಿಕವು ಉತ್ತರ ಕೊರಿಯಾವನ್ನು ಕೆಣಕುತ್ತಿದೆ ಮತ್ತು ತಾಳ್ಮೆಯನ್ನು ಪರೀಕ್ಷಿಸುತ್ತಿದೆ.  ಕೊರಿಯಾ ಪರ್ಯಾಯ ದ್ವೀಪದ ಉದ್ವಿಗ್ನತೆ ಶಮನಕ್ಕೆ ನಾವು ರಾಜತಾಂತ್ರಿಕ ಮಾರ್ಗದ ಮೂಲಕ ಪ್ರಯತ್ನಿಸುತ್ತಿದ್ದರೆ ಅಮೆರಿಕ ವಿಭಿನ್ನ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ರಶ್ಯದ ವಿದೇಶಾಂಗ ಸಚಿವ ಸೆರ್ಗೆಯ್ ರ್ಯಾಬ್ಕೋವ್ ಹೇಳಿದ್ದಾರೆ.

‘ಈ ಪ್ರದೇಶದಲ್ಲಿ ಅಮೆರಿಕ ಮತ್ತದರ ಮಿತ್ರದೇಶಗಳು ವಿಭಿನ್ನ ಮಾರ್ಗವನ್ನು ಬಯಸುತ್ತಿರುವುದು ಸ್ಪಷ್ಟವಾಗಿದೆ. ಅವರು  ಉತ್ತರ ಕೊರಿಯಾದ ತಾಳ್ಮೆ ಪರೀಕ್ಷಿಸುತ್ತಿರುವಂತೆ ಕಾಣುತ್ತದೆ’ ಎಂದವರು ಪ್ರತಿಕ್ರಿಯಿಸಿದ್ದಾರೆ.

share
Next Story
X