ಕತರ್ ಫಿಫಾ ವಿಶ್ವಕಪ್: ಕುರ್ಆನ್ ಸೂಕ್ತ ಪಠಿಸುವ ಮೂಲಕ ಉದ್ಘಾಟನೆ
ದೋಹಾ: 2022 ರ FIFA ವಿಶ್ವಕಪ್ಗಾಗಿ ಪಂದ್ಯಾವಳಿಗೆ ಕತಾರ್ನ ಅಲ್ ಖೋರ್ನಲ್ಲಿರುವ ಅಲ್-ಬೈತ್ ಸ್ಟೇಡಿಯಂನಲ್ಲಿ ಚಾಲನೆ ದೊರೆತಿದ್ದು, ಪವಿತ್ರ ಗ್ರಂಥ ಕುರಾನಿನ ಸೂಕ್ತದೊಂದಿಗೆ ಪಂದ್ಯಾಕೂಟವನ್ನು ಉದ್ಘಾಟಿಸಲಾಗಿದೆ.
ಯುಎಇಯ ಉಪಾಧ್ಯಕ್ಷ, ಪ್ರಧಾನಮಂತ್ರಿ ಮತ್ತು ದುಬೈ ಆಡಳಿತಗಾರ ಹಿಸ್ ಹೈನೆಸ್ ಶೇಖ್ ಮಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ , ದುಬೈ ಕ್ರೌನ್ ಪ್ರಿನ್ಸ್ ಮತ್ತು ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ಶೇಖ್ ಹಮ್ದಾನ್ ಬಿನ್ ಮಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸಮಾರಂಭವನ್ನು ನಟ ಮೋರ್ಗಾನ್ ಫ್ರೀಮನ್ ಮತ್ತು ಕತಾರ್ ಯೂಟ್ಯೂಬರ್ ಘನಿಮ್ ಅಲ್-ಮುಫ್ತಾಹ್ ನಿರೂಪಿಸಿದ್ದಾರೆ.
"ಓ ಮನುಕುಲವೇ, ನಾವು ನಿಮ್ಮನ್ನು ಗಂಡು ಮತ್ತು ಹೆಣ್ಣಿನಿಂದ ಸೃಷ್ಟಿಸಿದ್ದೇವೆ ಮತ್ತು ನೀವು ಒಬ್ಬರನ್ನೊಬ್ಬರು ತಿಳಿದುಕೊಳ್ಳಲು ನಿಮ್ಮನ್ನು ಜನಾಂಗಗಳು ಮತ್ತು ಬುಡಕಟ್ಟುಗಳನ್ನಾಗಿ ಮಾಡಿದ್ದೇವೆ" ಎಂಬ ಕುರಾನ್ ಸೂಕ್ತವನ್ನು ಅಲ್-ಮುಫ್ತಾಹ್ ಓದಿದ್ದಾರೆ.
A beautiful verses of the Holy Quran on the eve of FIFA World Cup Opening ceremony in Qatar #FIFAWorldCup #FIFAWorldCup2022 pic.twitter.com/ya9JrnR6q3
— Sajid Dilawar Khan (@SDK_CD) November 20, 2022