ಅಮೆರಿಕದ ವಾಲ್ಮಾರ್ಟ್ ಅಂಗಡಿಯಲ್ಲಿ ಬಂದೂಕುದಾರಿಯ ಗುಂಡಿನ ದಾಳಿಗೆ ಹಲವರು ಮೃತ್ಯು
ನ್ಯೂಯಾರ್ಕ್ : ಅಮೆರಿಕದ ವರ್ಜೀನಿಯಾ ರಾಜ್ಯದಲ್ಲಿ ಮಂಗಳವಾರ ತಡರಾತ್ರಿ ವಾಲ್ಮಾರ್ಟ್ ಅಂಗಡಿಯಲ್ಲಿ ಬಂದೂಕುಧಾರಿಯೊಬ್ಬ ಅನೇಕ ಜನರನ್ನು ಗುಂಡಿಕ್ಕಿ ಕೊಂದಿದ್ದಾನೆ. ಬಂದೂಕುಧಾರಿ ಕೂಡ ಸಾವನ್ನಪ್ಪಿದ್ದಾನೆ ಎಂದು ನಗರ ಅಧಿಕಾರಿಗಳು ತಿಳಿಸಿದ್ದಾರೆ.
"ಸ್ಯಾಮ್ಸ್ ಸರ್ಕಲ್ನಲ್ಲಿರುವ ವಾಲ್ಮಾರ್ಟ್ನಲ್ಲಿ ಹಲವು ಸಾವು-ನೋವಿಗೆ ಕಾರಣವಾಗಿರುವ ಘಟನೆಯನ್ನು ಚೆಸಾಪೀಕ್ ಪೊಲೀಸರು ಖಚಿತಪಡಿಸಿದ್ದಾರೆ. ಶೂಟರ್ ಸಾವನ್ನಪ್ಪಿದ್ದಾರೆ" ಎಂದು ಚೆಸಾಪೀಕ್ ಸಿಟಿ ಟ್ವಿಟರ್ನಲ್ಲಿ ತಿಳಿಸಿದೆ.
Next Story