ಚಂದ್ರನ ಕಕ್ಷೆ ಪ್ರವೇಶಿಸಿದ ನಾಸಾದ ಬಾಹ್ಯಾಕಾಶ ನೌಕೆ

ವಾಷಿಂಗ್ಟನ್, ನ.26: ನಾಸಾ(NASA)ದ ಓರಿಯನ್ ಬಾಹ್ಯಾಕಾಶ ನೌಕೆ ಶುಕ್ರವಾರ ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಒಂದು ವಾರದ ಹಿಂದೆ ಫ್ಲೋರಿಡಾದ ಉಡ್ಡಯನ ನೆಲೆಯಿಂದ ಗಗನಕ್ಕೇರಿದ್ದ ಬಾಹ್ಯಾಕಾಶ ನೌಕೆಯನ್ನು, ವಿಮಾನ ನಿಯಂತ್ರಕಗಳು ಯಶಸ್ವಿಯಾಗಿ ದೂರದ ಹಿಮ್ಮುಖ ಕಕ್ಷೆಗೆ ಸೇರಿಸಲು ಯಶಸ್ವಿಯಾಗಿವೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ನಾಸಾ)ದ ವೆಬ್ಸೈಟ್ ನಲ್ಲಿ ಮಾಹಿತಿ ನೀಡಲಾಗಿದೆ. ಈ ಪ್ರಥಮ ಪರೀಕ್ಷಾ ಪ್ರಯೋಗದಲ್ಲಿ ಮಾನವ ರಹಿತ ನೌಕೆಯನ್ನು ಚಂದ್ರನಲ್ಲಿಗೆ ರವಾನಿಸಲಾಗಿದೆ.
ಚಂದ್ರನ ಮೇಲ್ಮೆ ಯಲ್ಲಿ ಸುಮಾರಿ 40,000 ಮೈಲಿ ಎತ್ತರದ ಕಕ್ಷೆಯಲ್ಲಿ ಓರಿಯನ್ ನೌಕೆ ಸುತ್ತಲಿದೆ. ಚಂದ್ರನ ಸುತ್ತ ಅರ್ಧ ಕಕ್ಷೆಯನ್ನು ಪೂರ್ಣಗೊಳಿಸಲು ಓರಿಯನ್ಗೆ ಒಂದು ವಾರ ಬೇಕಾಗುತ್ತದೆ. ಬಳಿಕ ಅದು ಭೂಮಿಗೆ ಹಿಂತಿರುಗುವ ಪ್ರಯಾಣಕ್ಕಾಗಿ ಕಕ್ಷೆಯಿಂದ ನಿರ್ಗಮಿಸುತ್ತದೆ ಎಂದು ನಾಸಾ ಹೇಳಿದೆ.
Next Story





