ವಿಶ್ವಕಪ್ ನಲ್ಲಿ ಮೊರೊಕ್ಕೊ ವಿರುದ್ಧ ಬೆಲ್ಜಿಯಂಗೆ ಸೋಲು: ಬ್ರಸೆಲ್ಸ್ನಲ್ಲಿ ಗಲಭೆ, ಹಲವರು ವಶಕ್ಕೆ
ಬ್ರಸೆಲ್ಸ್: ಖತರ್ನಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಮೊರೊಕ್ಕೊ ತಂಡ ಜಯ ಗಳಿಸಿದ ನಂತರ ಬ್ರಸೆಲ್ಸ್ನಲ್ಲಿ ಕಾರು ಹಾಗೂ ಕೆಲವು ಎಲೆಕ್ಟ್ರಿಕ್ ಸ್ಕೂಟರ್ಗಳಿಗೆ ಬೆಂಕಿ ಹಚ್ಚಿ ಗಲಭೆ ಎಬ್ಬಿಸಲಾಗಿದೆ. ಗಲಭೆ ನಂತರ ಬೆಲ್ಜಿಯಂ ಪೊಲೀಸರು ಒಂದು ಡಝನ್ ಜನರನ್ನು ವಶಪಡಿಸಿಕೊಂಡಿದ್ದಾರೆ ಹಾಗೂ ಒಬ್ಬನನ್ನು ಬಂಧಿಸಿದ್ದಾರೆ.
ಬೆಲ್ಜಿಯಂ ರಾಜಧಾನಿಯಾದ್ಯಂತ ಹಲವಾರು ಸ್ಥಳಗಳಲ್ಲಿ ಗಲಭೆಗಳು ನಡೆದವು. ಅಲ್ಲಿ ಡಝನ್ಗಟ್ಟಲೆ ಜಮಾಯಿಸಿದ್ದ ಫುಟ್ಬಾಲ್ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಜಲ ಫಿರಂಗಿ ಮತ್ತು ಅಶ್ರುವಾಯು ಪ್ರಯೋಗಿಸಿದರು.
"ಸಂಜೆ 7 ಗಂಟೆಯ ಸುಮಾರಿಗೆ ಪರಿಸ್ಥಿತಿ ಶಾಂತವಾಯಿತು. ಸಂಬಂಧಪಟ್ಟ ವಲಯಗಳಲ್ಲಿ ಮುಂಜಾಗ್ರತಾ ಗಸ್ತುಗಳು ಜಾರಿಯಲ್ಲಿವೆ" ಎಂದು ಪೊಲೀಸ್ ವಕ್ತಾರ ಇಲ್ಸೆ ವ್ಯಾನ್ ಡಿ ಕೀರೆ ಹೇಳಿದರು.
Next Story