ಶಿಕಾಗೊ: ಹಿಜಾಬ್ ಧರಿಸಿದ ಮಹಿಳೆಯರ ಮೇಲೆ ಹಲ್ಲೆ
ಶಿಕಾಗೊ, ಆ. 16: ಇಲ್ಲಿನ ವೆಸ್ಟ್ ರೋಜರ್ಸ್ ಪಾರ್ಕ್ ಉಪನಗರದಲ್ಲಿ ಮಹಿಳೆಯೊಬ್ಬಳು ಕಳೆದ ವಾರ ಹಿಜಾಬ್ ಧರಿಸಿದ ತಾಯಿ-ಮಗಳನ್ನು ‘ಐಸಿಸ್’ ಎಂದು ಕರೆದು, ಅವರ ಮೇಲೆ ಹಲ್ಲೆ ನಡೆಸಿ, ಉಗುಳಿದ ಘಟನೆ ವರದಿಯಾಗಿದೆ.
ಮಹಿಳೆಯು ತಮ್ಮ ವಿರುದ್ಧ ಇಸ್ಲಾಮ್ ವಿರೋಧಿ ನಿಂದನೆಗಳನ್ನು ನಡೆಸಿದ್ದಾಳೆ ಎಂದು ಈ ಮುಸ್ಲಿಮ್ ಮಹಿಳೆಯರು ‘ಎನ್ಬಿಸಿ ಶಿಕಾಗೊ’ಗೆ ಚಾನೆಲ್ಗೆ ಹೇಳಿದ್ದಾರೆ.
ಪೊಲೀಸರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದಾಗಿಯೂ ಅವರು ಆರೋಪಿಸಿದ್ದಾರೆ.
Next Story