ಫ್ರಾನ್ಸ್: ಗುಂಡಿನ ದಾಳಿ ಇಬ್ಬರು ಮೃತ್ಯು; ನಾಲ್ವರಿಗೆ ಗಾಯ
ಪ್ಯಾರಿಸ್, ಡಿ.23: ಫ್ರಾನ್ಸ್(France) ನ ರಾಜಧಾನಿ ಪ್ಯಾರಿಸ್(Paris) ನಲ್ಲಿ ಶುಕ್ರವಾರ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಹತರಾಗಿದ್ದು ಇತರ 4 ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಶಂಕಿತ ದಾಳಿಕೋರನನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ಕುರ್ದಿಶ್ ಸಾಂಸ್ಕೃತಿಕ ಕೇಂದ್ರದ ಸಮೀಪದಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಫ್ರಾನ್ಸ್ ನ ಬಿಎಫ್ಎಮ್ ಟಿವಿ ವರದಿ ಮಾಡಿದೆ. ಸುಮಾರು 69 ವರ್ಷದ ಬಂದೂಕುಧಾರಿ ವ್ಯಕ್ತಿಯನ್ನು ಬಂಧಿಸಲಾಗಿದ್ದು ಗುಂಡು ಹಾರಿಸಲು ಕಾರಣವೇನೆಂಬುದು ಸ್ಪಷ್ಟವಾಗಿಲ್ಲ. ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story