ಅಮೆರಿಕದ ಗಡಿ ಗೋಡೆಯಿಂದ ಬಿದ್ದು ಭಾರತದ ಪ್ರಜೆ ಮೃತ್ಯು
ನ್ಯೂಯಾರ್ಕ್, ಡಿ.23: ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸುವ ಯತ್ನದಲ್ಲಿ, ಗಡಿ ಗೋಡೆಯ ಮೇಲಿಂದ ಬಿದ್ದು ಭಾರತದ ಪ್ರಜೆ ಮೃತಪಟ್ಟಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಮೃತನನ್ನು ಗುಜರಾತ್ ಗಾಂಧೀನಗರದ ನಿವಾಸಿ ಬೃಜ್ಕುಮಾರ್ ಯಾದವ್(Brijkumar Yadav) ಎಂದು ಗುರುತಿಸಲಾಗಿದೆ. ಅಮೆರಿಕಕ್ಕೆ ಅಕ್ರಮ ಪ್ರವೇಶಿಸುವ ಪ್ರಯತ್ನದಲ್ಲಿ ಅಮೆರಿಕ-ಮೆಕ್ಸಿಕೋ ಗಡಿಯ ಗೋಡೆಯ ಮೇಲಿಂದ ಕೆಳಜಾರಿ ಬಿದ್ದು ಮೃತಪಟ್ಟಿದ್ದಾನೆ. ಆತನ ಪತ್ನಿ ಮತ್ತು 3 ವರ್ಷದ ಪುತ್ರ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿ ಹೇಳಿದೆ.
ಗಡಿ ಗೋಡೆಯ ಮೇಲಿಂದ ಯಾದವ್ ಮತ್ತು ಆತನ ಪತ್ನಿ ಅಮೆರಿಕದ ಭೂಪ್ರದೇಶಕ್ಕೆ ಬಿದ್ದರೆ, ಪುತ್ರ ಮೆಕ್ಸಿಕೋದ ಪ್ರದೇಶಕ್ಕೆ ಬಿದ್ದಿದ್ದಾನೆ. ಈ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ವರದಿ ಹೇಳಿದೆ.
Next Story