ಪಾಕಿಸ್ತಾನ: ಕಾರು ಬಾಂಬ್ ಸ್ಫೋಟದಲ್ಲಿ ಪೊಲೀಸ್ ಅಧಿಕಾರಿ ಮೃತ್ಯು; ಹಲವರಿಗೆ ಗಾಯ
ಇಸ್ಲಮಾಬಾದ್, ಡಿ.23: ಪಾಕಿಸ್ತಾನದ ರಾಜಧಾನಿ ಇಸ್ಲಮಾಬಾದ್(Islamabad) ನ ಚೆಕ್ಪೋಸ್ಟ್ ನಲ್ಲಿ ಶುಕ್ರವಾರ ಕಾರು ಬಾಂಬ್ ಸ್ಫೋಟದಲ್ಲಿ ಪೊಲೀಸ್ ಅಧಿಕಾರಿ ಮೃತನಾಗಿದ್ದು ಇತರ ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ.
ಕಾರಿನಲ್ಲಿ ಮಹಿಳೆ ಹಾಗೂ ಪುರುಷರಿದ್ದರು. ಚೆಕ್ಪೋಸ್ಟ್ ನಲ್ಲಿ ಪೊಲೀಸರ ಸೂಚನೆಯನ್ನು ಧಿಕ್ಕರಿಸಿ ಮುಂದಕ್ಕೆ ಚಲಿಸಿದ ಕಾರನ್ನು ಪೊಲೀಸರು ಬೆನ್ನಟ್ಟಿದ್ದು ಕಾರನ್ನು ತಡೆದು ನಿಲ್ಲಿಸಿದಾಗ ಕಾರಿನಲ್ಲಿದ್ದ ಬಾಂಬನ್ನು ಸ್ಫೋಟಿಸಲಾಗಿದೆ.
ಸ್ಫೋಟದಲ್ಲಿ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದು ಇತರ 6 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story