ಚೀನಾದ ರಾಸಾಯನಿಕ ಸ್ಥಾವರದಲ್ಲಿ ಸ್ಫೋಟ: ಇಬ್ಬರು ಮೃತ್ಯು; 34 ಮಂದಿಗೆ ಗಾಯ
ಬೀಜಿಂಗ್, ಜ.16: ಈಶಾನ್ಯ ಚೀನಾದ ರಾಸಾಯನಿಕ ಸ್ಥಾವರದಲ್ಲಿ ರವಿವಾರ ಸ್ಫೋಟ ಸಂಭವಿಸಿ ಕನಿಷ್ಟ ಇಬ್ಬರು ಮೃತಪಟ್ಟಿದ್ದಾರೆ. ಇತರ 34 ಮಂದಿ ಗಾಯಗೊಂಡಿದ್ದು 12 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಜಧಾನಿ ಬೀಜಿಂಗ್ನ ಪೂರ್ವದ ಲಿಯಾನಿಂಗ್ ಪ್ರಾಂತದ ಹೊರವಲಯದ ಪಂಜಿನ್ ನಗರದಲ್ಲಿನ ರಾಸಾಯನಿಕ ಸ್ಥಾವರದಲ್ಲಿ ಸ್ಫೋಟ ಸಂಭವಿಸಿದ್ದು ಸ್ಥಾವರದ ಕಟ್ಟಡದಿಂದ ಬೆಂಕಿಯ ಕೆನ್ನಾಲಗೆಯ ಜತೆ ದಟ್ಟ ಹೊಗೆ ಮೇಲೇರುತ್ತಿರುವ ಫೋಟೊವನ್ನು ಸ್ಥಳೀಯ ಮಾಧ್ಯಮಗಳು ಪ್ರಕಟಿಸಿವೆ. ಅಗ್ನಿಶಾಮಕ ತಂಡ ಬೆಂಕಿಯನ್ನು ನಿಯಂತ್ರಿಸಿದ್ದು, ಈ ಪ್ರದೇಶದಲ್ಲಿನ ವಾಯು ಗುಣಮಟ್ಟದ ಮೇಲೆ ಆಗಿರುವ ಪರಿಣಾಮವನ್ನು ಸ್ಥಳೀಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಸ್ಫೋಟದ ಕಾರಣದ ಬಗ್ಗೆ ತನಿಖೆ ಮುಂದುವರಿದಿದೆ ಎಂದು ವರದಿಯಾಗಿದೆ.
Next Story