ಭೀಕರ ಭೂಕಂಪದಲ್ಲಿ ಟರ್ಕಿ ಗೋಲ್ ಕೀಪರ್ ಅಹ್ಮದ್ ಅಯ್ಯುಬ್ ಮೃತ್ಯು
ಇಸ್ತಾಂಬುಲ್: ಟರ್ಕಿಯ ಗೋಲ್ ಕೀಪರ್ ಅಹ್ಮದ್ ಅಯ್ಯುಬ್ ಅವರು ತಮ್ಮ ತಾಯ್ನಾಡಿನಲ್ಲಿ ಸಂಭವಿಸಿದ ಭೀಕರ ಭೂಕಂಪದ (Turkey earthquake) ವೇಳೆ ಸಾವನ್ನಪ್ಪಿದ್ದಾರೆ ಎಂದು ಅವರ ಕ್ಲಬ್ ಯೆನಿ ಮಲಟ್ಯಾಸ್ಪೋರ್ ಖಚಿತಪಡಿಸಿದೆ.
“ನಮ್ಮ ಗೋಲ್ ಕೀಪರ್, ಅಹ್ಮದ್ ಅಯ್ಯುಬ್ ಟರ್ಕಸ್ಲಾನ್ (Ahmet Eyup Turkaslan), ಭೂಕಂಪದಿಂದಾಗಿ ಉಂಟಾದ ಕಟ್ಡಡ ಕುಸಿತದ ನಂತರ ತನ್ನ ಪ್ರಾಣವನ್ನು ಕಳೆದುಕೊಂಡರು. ಉತ್ತಮ ವ್ಯಕ್ತಿಯಾಗಿದ್ದ ನಿಮ್ಮನ್ನು ನಾವು ಮರೆಯುವುದಿಲ್ಲ" ಎಂದು ಕ್ಲಬ್ ಟ್ವಿಟರ್ ನಲ್ಲಿ ತಿಳಿಸಿದೆ.
2021 ರಲ್ಲಿ ಕ್ಲಬ್ ಗೆ ಸೇರಿದ ನಂತರ, 28 ವರ್ಷದ ಟರ್ಕಸ್ಲಾನ್, ಟರ್ಕಿಯ ಎರಡನೇ ವಿಭಾಗದ ಕ್ಲಬ್ ಯೆನಿ ಮಲಟ್ಯಾಸ್ಪೊ ಪರ ಆರು ಬಾರಿ ಆಡಿದ್ದರು.
ಇದನ್ನೂ ಓದಿ: ಟರ್ಕಿ, ಸಿರಿಯಾದಲ್ಲಿ ಭೂಕಂಪ: ಮೃತರ ಸಂಖ್ಯೆ 7800 ಕ್ಕೇರಿಕೆ
Başımız sağ olsun!
— Yeni Malatyaspor (@YMSkulubu) February 7, 2023
Kalecimiz Ahmet Eyüp Türkaslan, meydana gelen depremde göçük altında kalarak, hayatını kaybetmiştir. Allah rahmet eylesin, mekanı cennet olsun.
Seni unutmayacağız güzel insan. pic.twitter.com/15yjH9Sa1H