ಟರ್ಕಿ ಭೂಕಂಪದ ಭೀಕರತೆ: ಅವಶೇಷಗಳಡಿಯಲ್ಲಿರುವ ಮಗಳ ಕೈ ಹಿಡಿದು ನಿರ್ಲಿಪ್ತವಾಗಿ ಕುಳಿತ ತಂದೆಯ ಮನಕಲಕುವ ಫೋಟೋ ವೈರಲ್
-

Photo credit: Adem Altan/AFP/Getty Images
ಇಸ್ತಾಂಬುಲ್: ದಕ್ಷಿಣ ಟರ್ಕಿ (Turkey) ಮತ್ತು ಉತ್ತರ ಸಿರಿಯಾದಲ್ಲಿ (Syria) ನಡೆದ ಪ್ರಬಲ ಭೂಕಂಪನದಿಂದ (earthquake) ಉಂಟಾದ ಅಪಾರ ಸಾವು ನೋವು ಜಗತ್ತನ್ನೇ ತಲ್ಲಣಗೊಳಿಸಿದೆ. ಈ ನಡುವೆ ಭೂಕಂಪದಿಂದ ಧರಾಶಾಹಿಯಾದ ಹಲವಾರು ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿಕೊಂಡವರಿಗಾಗಿ ನಡೆಸಲಾಗುತ್ತಿರುವ ರಕ್ಷಣಾ ಕಾರ್ಯಾಚರಣೆಯ ನಡುವೆ ಕೆಲವೊಂದು ಮನಕಲಕುವ ವಿದ್ಯಮಾನಗಳೂ ನಡೆದಿವೆ.
ಟರ್ಕಿಯ ಕಹರಮನ್ಮರಸ್ ಪ್ರಾಂತ್ಯದಲ್ಲಿ ನಡೆದ ಇಂತಹ ಒಂದು ಮನಕಲಕುವ ವಿದ್ಯಮಾನದ ಫೋಟೋ ಒಂದರಲ್ಲಿ ದುಃಖಪೀಡಿತ ವ್ಯಕ್ತಿಯೊಬ್ಬ ತನ್ನ ನೆಲಸಮವಾದ ಮನೆಯ ಅವಶೇಷಗಳ ಪಕ್ಕ ಕುಳಿದುಕೊಂಡಿದ್ದೇ ಅಲ್ಲದೆ ಅವಶೇಷಗಳಡಿಯಲ್ಲಿದ್ದ ಮಂಚದಲ್ಲಿ ಮಲಗಿ ಅಲ್ಲಿಯೇ ಮೃತಪಟ್ಟ ತನ್ನ ಪುತ್ರಿಯ ಕೈ ಹಿಡಿದುಕೊಂಡು ನಿರ್ಲಿಪ್ತವಾಗಿ ಕುಳಿತುಕೊಂಡಿರುವುದು ಕಾಣಿಸುತ್ತದೆ. ಮೆಸುಟ್ ಹನ್ಸರ್ ಎಂಬ ಈ ವ್ಯಕ್ತಿಯ 15 ವರ್ಷದ ಪುತ್ರಿ ಗಾಢ ನಿದ್ದೆಯಲ್ಲಿರುವಾಗಲೇ ಸಂಭವಿಸಿದ ಭೂಕಂಪದಲ್ಲಿ ಸಾವನ್ನಪ್ಪಿದ್ದಾಳೆ. ಅವಶೇಷಗಳಡಿಯಲ್ಲಿ ಆಕೆಯ ಮಂಚದ ಎರಡು ಕಾಲುಗಳು ಕಾಣಿಸುತ್ತವೆ ಹಾಗೂ ಮಂಚದಲ್ಲಿ ಆಕೆಯ ಒಂದು ಕೈಮಾತ್ರ ಕಾಣಿಸುತ್ತದೆ. ಇದನ್ನೇ ಹಿಡಿದು ತಂದೆ ಪರಿತಪಿಸುತ್ತಿರುವ ಈ ಚಿತ್ರಣ ಎಂತಹ ಕಲ್ಲು ಹೃದಯದವರ ಕಣ್ಣಲ್ಲೂ ನೀರು ತರಿಸದೇ ಇರದು.
ಇದೇ ಪ್ರದೇಶದ ಇನ್ನೊಂದೆಡೆ ರಕ್ಷಣಾ ಕಾರ್ಯಕರ್ತರು ಅವಶೇಷಗಳಡಿಯಿಂದ ಇಬ್ಬರು ಮಕ್ಕಳನ್ನು ಜೀವಂತವಾಗಿ ಹೊರತೆಗೆದಿದ್ದಾರೆ.
ಉತ್ತರ ಸಿರಿಯಾದಲ್ಲಿ ನವಜಾತ ಶಿಶುವನ್ನು ಕೂಡ ರಕ್ಷಿಸುವಲ್ಲಿ ರಕ್ಷಣಾ ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ.
This photo by Adem Altan is so powerful and devastating. Father Mesut Hancer is holding the hand of his deceased 15-year-old daughter, Irmak, as she lies on her bed.
— Jason Gregor (@JasonGregor) February 7, 2023
If you can please support those in Turkey who were impacted by the earthquake. #RIPIrmak pic.twitter.com/HDGo19CP3z
Mesut Hancer holds his 15yo daughter Irmak's hand after she died in Monday's massive earthquake. She is just one of over 8,000 people killed in Turkey and Syria. This photo reminds us of the loss & pain each family will feel forever. (Pix by @AdemAltan3) https://t.co/66edvZdsa2 pic.twitter.com/8dEvECgA9Q
— Raziye Akkoç (@RazAkkoc) February 8, 2023
#Turkey - Mesut Hancer holds the hand of his 15-year-old daughter Irmak, who died in the earthquake in Kahramanmaras.
— AFP Photo (@AFPphoto) February 8, 2023
@AdemAltan3 #AFP pic.twitter.com/69ipyEOcJD
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.