ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ವಿವೇಕ್ ರಾಮಸ್ವಾಮಿ ಸ್ಪರ್ಧೆ?
ವಾಶಿಂಗ್ಟನ್,ಫೆ.14: 2024ರ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ (Republican Party) ಅಭ್ಯರ್ಥಿಯಾಗಿ ಸ್ಪರ್ಧಿಸುವ ತನ್ನ ಯೋಜನೆಯನ್ನು ಭಾರತೀಯ ಮೂಲದ ಅಮೆರಿಕನ್ ಪ್ರಜೆ ಹಾಗೂ ಉದ್ಯಮಿ ವಿವೇಕ್ ರಾಮಸ್ವಾಮಿ (Vivek Ramaswamy) ಶೀಘ್ರದಲ್ಲೇ ಪ್ರಕಟಿಸಲಿದ್ದಾರೆಂದು ಕೆಲವು ಅಮೆರಿಕನ್ ಮಾಧ್ಯಮಗಳು ವರದಿ ಮಾಡಿವೆ.
ಉದ್ಯಮಿ ಹಾಗೂ ಶತಕೋಟ್ಯಾಧೀಶರಾದ ವಿವೇಕ್ ರಾಮಸ್ವಾಮಿ ಪ್ರಸ್ತುತ ಐಯೋವಾ ರಾಜ್ಯದ ವಿವಿಧೆಡೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು ಪೂರ್ವಾಭಾವಿಯಾಗಿ ವಾಸ್ತವಿಕ ಸ್ಥಿತಿಯನ್ನು ಅರಿಯುವ ಪ್ರಯತ್ನದಲ್ಲಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಅಮೆರಿಕದ ಅಧ್ಯಕ್ಷ ಚುನಾವಣೆಗೆ ಸ್ಪರ್ಧಾಕಾಂಕ್ಷಿಯಾಗುವ ಬಗ್ಗೆ ವಿವೇಕ್ ರಾಮಸ್ವಾಮಿ ಅತ್ಯಂತ ಗಂಭೀರವಾಗಿ ಚಿಂತಿಸುತ್ತಿದ್ದಾರೆ. ಕೇವಲ ಪ್ರಚಾರಕ್ಕಾಗಿ ಗಮನಸೆಳೆಯುವ ತಂತ್ರಗಾರಿಕೆ ಇದಲ್ಲ’’ ಎಂದು ಪೊಲಿಟಿಕೋ ಸುದ್ದಿಸಂಸ್ಥೆ ವರದಿ ಮಾಡಿದೆ.
ಅಮೆರಿಕನ್ ಸಮಾಜಕ್ಕೆ ಚೈತನ್ಯವನ್ನುತುಂಬುವ ಹಾಗೂ ಮೌಲ್ಯಭರಿತವಾದ ಸಂಸ್ಕೃತಿಯನ್ನು ಮರಳಿ ತರುವ ಗುರಿಯೊಂದಿಗೆ ತನ್ನ ಚುನಾವಣಾ ಪ್ರಚಾರವನ್ನು ನಡೆಸಲಿದ್ದಾರೆಂದು ವರದಿ ಹೇಳಿದೆ.
ಅಮೆರಿಕದ ಸಿನ್ಸಿನಾಟಿಯಲ್ಲಿ ರಾಮಸ್ವಾಮಿ ಜನಿಸಿದ್ದ ವಿವೇಕ್ ರಾಮಸ್ವಾಮಿ ಕೇರಳದಿಂದ ವಲಸೆ ಹೋದ ಭಾರತೀಯ ಮೂಲದ ದಂಪತಿಗಳ ಪುತ್ರ. ಅವರ ತಂದೆ ಇಲೆಕ್ಟ್ರಿಕ್ ಎಂಜಿನಿಯರ್ ಆಗಿದ್ದು, ತಾಯಿ ವಾರ್ಧಕ್ಯ ರೋಗಗಳ ತಜ್ಞೆ.
ಯಶಸ್ವಿ ಬಯೋಟೆಕ್ ಹಾಗೂ ಔಷದಿ ತಯಾರಕ ಉದ್ಯಮಿಯಾಗಿರುವ ವಿವೇಕ್ ರಾಮಸ್ವಾಮಿ ಅಮೆರಿಕದಲ್ಲಿ ಹೆಸರು ಮಾಡಿದ್ದಾರೆ.
ಇದನ್ನು ಓದಿ: ಅದಾನಿ ಗ್ರೂಪ್ ಶೇರುಗಳಲ್ಲಿ ನಿಲ್ಲದ ಕುಸಿತ: 22 ದಿನಗಳಲ್ಲಿಅರ್ಧಕ್ಕೂ ಹೆಚ್ಚು ನಿವ್ವಳ ಸಂಪತ್ತು ನಷ್ಟ