ಅಮೆರಿಕ: ಕಾರಿನಲ್ಲಿದ್ದ ಮಗು ಅತಿಯಾದ ಶಾಖದಿಂದ ಸಾವು; ತಂದೆಯ ವಿರುದ್ಧ ಪ್ರಕರಣ ದಾಖಲು
ವಾಷಿಂಗ್ಟನ್, ಮಾ.2: ಕಾರಿನಲ್ಲಿದ್ದ 2 ವರ್ಷದ ಮಗುವೊಂದು ವಿಪರೀತ ಶಾಖದಿಂದ ಮೃತಪಟ್ಟ ಘಟನೆಯಲ್ಲಿ ಮಗುವಿನ ತಂದೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು `ಯುಎಸ್ಎ ಟುಡೆ' ವರದಿ ಮಾಡಿದೆ.
ಅಲಬಾಮಾ ಪ್ರಾಂತದ ಅಟ್ಮೋರ್ ನಗರದಲ್ಲಿ ಫೆಬ್ರವರಿ 27ರಂದು ಈ ಘಟನೆ ನಡೆದಿದೆ. 51 ವರ್ಷದ ಶಾನ್ ರೂನ್ಸವಾಲ್ ಎಂಬಾತ ತನ್ನ 2 ವರ್ಷದ ಮಗುವನ್ನು ಶಿಶುವಿಹಾರದಲ್ಲಿ ಬಿಡುವ ಬದಲು ಕಾರಿನೊಳಗೆ 8 ಗಂಟೆ ಬಿಟ್ಟಿದ್ದ. ಆಗ ತಾಪಮಾನ 26.6 ಡಿಗ್ರಿ ಸೆಲ್ಶಿಯಸ್ನಷ್ಟಿದ್ದು ಕಾರಿನೊಳಗೆ ತಾಪಮಾನ 50 ಡಿಗ್ರಿ ಸೆಲ್ಶಿಯಸ್ ಗೆ ಏರಿದ್ದರಿಂದ ಮಗು ಮೃತಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ. ಶಾನ್ ರೂಸ್ವಾಲ್ ವಿರುದ್ಧ ನಿರ್ಲಕ್ಷ್ಯದ ವರ್ತನೆಯಿಂದ ಪ್ರಾಣಹಾನಿ ಎಸಗಿದ ಪ್ರಕರಣವನ್ನು ದಾಖಲಿಸಲಾಗಿದೆ.
Next Story